ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂತಾರಾಷ್ಟ್ರೀಯ ದಾಖಲೆಗೆ ಸಿದ್ಧ

Lingaraj Badiger
Updated On : 15 Jul 2013, 10:46 am

ಚಿಕ್ಕಮಗಳೂರು: ಒಂದು ನಿಮಿಷದಲ್ಲಿ 68 ಬಿಯರ್ ಬಾಟಲಿಗಳ ಮುಚ್ಚಳಗಳನ್ನು ಹಲ್ಲಿನಿಂದ ಕಚ್ಚಿ ತೆಗೆದು ಗಿನ್ನಿಸ್ ದಾಖಲೆ ನಿರ್ಮಿಸಿದ್ದ ತಾಲೂಕಿನ ಹಿರೇಕೊಳಲೆ ಗ್ರಾಮದ ಯುವಕ ಕೆ.ಸಿ. ಮುರಳಿ ಅವರು ತಮ್ಮದೇ ದಾಖಲೆ ಮುರಿಸಲು ಇದೀಗ ಸಿದ್ಧತೆ ಮಾಡಿಕೊಂಡಿದ್ದಾರೆ.
 ಸಿನರ್ಜಿ ಸಂಸ್ಥೆಯ ಚಾನೆಲ್ ಡಿ ಇಟಲಿ ಇದೇ ಜುಲೈ 16 ರಿಂದ 18ರವರೆಗೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಏರ್ಪಡಿಸಿರುವ ವಿಶ್ವದಾಖಲೆ ಸ್ಪರ್ಧೆಯಲ್ಲಿ ಮುರಳಿ ಪಾಲ್ಗೊಳ್ಳಲಿದ್ದಾರೆ. ಹಿಂದೆ ಬೆಂಗಳೂರಿನ ಗಿರೀಶ್ ಕುಮಾರ್ ಅವರು 63 ಬಿಯರ್ ಬಾಟಲಿಗಳ ಮುಚ್ಚಳ ತೆಗೆದು ದಾಖಲೆ ನಿರ್ಮಿಸಿದ್ದರು. 2011ರಲ್ಲಿ ಕೆ.ಸಿ. ಮುರಳಿ ಒಂದು ನಿಮಿಷದಲ್ಲಿ 68 ಬಿಯರ್ ಬಾಟಲಿಗಳ ಮುಚ್ಚಳಗಳನ್ನು ಹಲ್ಲಿನಿಂದ ಕಚ್ಚಿ ತೆಗೆಯುವ ಮೂಲಕ ಗಿರೀಶ್‌ಕುಮಾರ್ ಅವರ ದಾಖಲೆ ಮುರಿದಿದ್ದರು. ಇದೀಗ ಅವರದೇ ದಾಖಲೆಯನ್ನು ಬ್ರೇಕ್ ಮಾಡಲು ಟರ್ಕಿಗೆ ತೆರಳುತ್ತಿದ್ದಾರೆ.
 ಪಾರ್ಟಿಗಳಲ್ಲಿ ಕೊಕಾಕೋಲ ಬಾಟಲಿಯ ಮುಚ್ಚಳವನ್ನು ಹಲ್ಲಿನಿಂದ ಕಚ್ಚಿ ತೆಗೆಯುತ್ತಿದ್ದ ಅವರು, ಇದನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡು, ಯುಬಿ ಕಂಪನಿಯವರು ನಡೆಸಿದ ಸ್ಪರ್ಧೆಯಲ್ಲಿ 68 ಬಿಯರ್ ಬಾಟಲಿಗಳ ಮುಚ್ಚಳಗಳನ್ನು ಹಲ್ಲಿನಿಂದ ಕಚ್ಚಿ ತೆಗೆದಿದ್ದರು. ಟರ್ಕಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ 70 ಬಾಟಲಿಗಳ ಮುಚ್ಚಳ ತೆಗೆದು ದಾಖಲೆ ನಿರ್ಮಿಸುವ ವಿಶ್ವಾಸವನ್ನು ಮುರಳಿ ಅವರು ವ್ಯಕ್ತಪಡಿಸಿದ್ದಾರೆ.
--
ಹೆದ್ದಾರಿಗಳನ್ನು ಮೇಲ್ದೆರ್ಜೆಗೇರಿಸಲು ಮನವಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಶಾಸಕ ಸಿ.ಟಿ. ರವಿ ಅವರು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಸಚಿವ ಆಸ್ಕರ್ ಫರ್ನಾಂಡೀಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
 ಜಿಲ್ಲೆಯ ಕಡೂರು- ಕಾಯಿಂಗಾಡ್ ರಾಷ್ಟ್ರೀಯ ಹೆದ್ದಾರಿ- 64, ಕಡೂರು ರಾಷ್ಟ್ರೀಯ ಹೆದ್ದಾರಿ- 206, ತುಮಕೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಿಂದ ಜಿಲ್ಲಾ ಕೇಂದ್ರದ ಮೂಲಕ ಮೂಡಿಗೆರೆ ಹ್ಯಾಂಡ್ ಫೋಸ್ಟ್ ಹತ್ತಿರದ ಹೆದ್ದಾರಿ- 234, ಮಂಗಳೂರು- ವಿಲ್ಲುಂಪುರಂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಒಟ್ಟು 72.20 ಕಿ.ಮೀ. ಇದೆ ಎಂದು ತಿಳಿಸಿದ್ದಾರೆ.
 ಕಡೂರು- ಮೂಡಿಗೆರೆಯ ಎರಡು ತಾಲೂಕು ಹಾಗೂ ಜಿಲ್ಲಾ ಕೇಂದ್ರದ ಮೂಲಕ ಹಾದು ಹೋಗುವ ಈ ರಸ್ತೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಮುಖವಾಗಿದ್ದು, ಬೀರೂರು- ಕಡೂರು ರೈಲ್ವೆ ಜಂಕ್ಷನ್ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳಗಳ ಸಂಪರ್ಕ ಕೇಂದ್ರವು ರಸ್ತೆ ಇದಾಗಿದೆ ಎಂದು ಹೇಳಿದ್ದಾರೆ.
 ತುಮಕೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ಹಾಗೂ ಮಂಗಳೂರು- ವಿಲ್ಲುಂಪುರಂ ರಾಷ್ಟ್ರೀಯ ಹೆದ್ದಾರಿ- 234ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ಕಡೂರು- ಕಾಯಿಂಗಾಡ್ ರಸ್ತೆಯಿಂದ 72.20 ಕಿ.ಮೀ. ವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದರಿಂದ ಅನುಕೂಲವಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement