ಕಾನೂನು ಅರಿವು ನೆರವು ಕಾರ್ಯಕ್ರಮ
ಕ.ಪ್ರ.ವಾರ್ತೆ, ನ.ರಾ.ಪುರ, ಜು.14
ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರಕ್ಷಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉಪ ಕಾರಾಗೃಹ ಆವರಣದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.
ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ನ್ಯಾ.ಎಚ್.ಕೆ. ನವೀನ್ ಕಾರ್ಯಕ್ರಮ ಉದ್ಘಾಟಿಸಿ ಆರೋಪಿಗಳ ಹಕ್ಕು ಮತ್ತು ಹಿತಾಸಕ್ತಿ ಬಗ್ಗೆ ಮಾತನಾಡಿದರು.
ವಕೀಲ ಎಸ್. ಸಂತೋಷಕುಮಾರ್ ಮಾತನಾಡಿ, ಆರೋಪಿಗಳು ತಾವು ಮಾಡಿದ ತಪ್ಪಿಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಮಾಡಿಕೊಳ್ಳುವ ಮೂಲಕ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ. ಜಯಪ್ರಕಾಶ್ ಮಾತನಾಡಿ, ಆರೋಪಿಗಳು ಸನ್ನಡತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಉಪ ಕಾರಾಗೃಹದ ಅಧೀಕ್ಷಕ ಮೊರಬಾದ್, ಸರ್ಕಾರಿ ಸಹಾಯಕ ಅಭಿಯೋಜಕ ಲೋಹಿತಾಶ್ವಾಚಾರ್, ಹಿರಿಯ ವಕೀಲರಾದ ಕೆ.ಪಿ. ಸುರೇಶ್ಕುಮಾರ್, ಎಂ.ಸಿ. ಸುಮ, ಎಚ್.ಆರ್. ವೆಂಕಟೇಶಮೂರ್ತಿ, ಆರಕ್ಷಕ ಸಿಬ್ಬಂದಿಗಳು, ಜೈಲಿನ ಸಿಬ್ಬಂದಿ ಇದ್ದರು.