ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರ ಆಯ್ಕೆ
ಬಾಳೆಹೊನ್ನೂರು: ನರಸಿಂಹರಾಜಪುರ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಾಳೆಹೊನ್ನೂರಿನ ಭಾಸ್ಕರ್ ವೆನಿಲ್ಲಾ ಆಯ್ಕೆಯಾಗಿದ್ದಾರೆ.
ಕೊಪ್ಪದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಈ ಆಯ್ಕೆಯನ್ನು ಘೋಷಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್, ಕ್ಷೇತ್ರ ಸಮಿತಿ ಅಧ್ಯಕ್ಷ ನೀಲೇಶ್, ವಿಭಾಗೀಯ ಪ್ರಚಾರಕ ಗಣೇಶರಾವ್ ಮತ್ತು ಪಕ್ಷದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಭಾಸ್ಕರ್ ವೆನಿಲ್ಲಾ ಹಿಂದೆ ಪಕ್ಷದ ಹೋಬಳಿ ಘಟಕದ ಅಧ್ಯಕ್ಷರಾಗಿ ಹಾಗೂ ತಾಲೂಕು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪದವಿ ಸ್ವೀಕಾರ
ನರಸಿಂಹರಾಜಪುರ: ಲಯನ್ಸ್ ಕ್ಲಬ್ ಪದವಿ ಸ್ವೀಕಾರ ಸಮಾರಂಭ 15 ರ ಸಂಜೆ 7 ಗಂಟೆಗೆ ಕೃಷಿ ಭವನದಲ್ಲಿ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಪಿ. ಸನ್ನಿ, ಕಾರ್ಯದರ್ಶಿ ಎನ್.ಎಸ್. ರವಿಚಂದ್ರ, ಖಜಾಂಚಿ ಡಿ. ರಮೇಶ್ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.