ಪರಿಸರ ಸಮತೋಲನ ಕಾಪಾಡಲು ಮನವಿ
ತರೀಕೆರೆ: ಹೆಚ್ಚು ಕಾಡು ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕೆಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸಮೀಪದ ತಣಿಗೇಬೈಲು ಗ್ರಾಮದಲ್ಲಿ ಕುವೆಂಪು ವಿ.ವಿ. ಮಟ್ಟದ ಚಾರಣ ಮತ್ತು ಪರಿಸರ ಅಧ್ಯಯನದ ಉದ್ಘಾಟನೆ ನೆರವೇರಿಸಿ
ಮಾತನಾಡಿ, ಶೇ.30ರಷ್ಟು ಕಾಡು ಇರಬೇಕು ಆದರೆ ಇದೀಗ ಶೇ.20 ರಷ್ಟು ಮಾತ್ರ ಕಾಡು ಇದೆ. ಹೆಚ್ಚು ಅರಣ್ಯವನ್ನು ಬೆಳೆಸುವುದರ ಮೂಲಕ ಪರಿಸರದ ಸಮತೋಲನ ಕಾಪಾಡಬೇಕು ಎಂದು ತಿಳಿಸಿದರು.
ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜ್ ಮಾತನಾಡಿ, ಕುವೆಂಪು ವಿವಿಯಲ್ಲಿ ಒಟ್ಟು 183 ಕಾಲೇಜುಗಳಿದ್ದು, ಈ ಶಿಬಿರದಲ್ಲಿ 83 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬಹುದಾಗಿದ್ದು, ಗ್ರಾಮೀಣ ಜನರ ಕಷ್ಟಗಳನ್ನು ಹತ್ತಿರದಿಂದ ಗಮನಿಸಿ ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಗ್ರಾಮೀಣರಿಗೆ ಆದ್ಯತೆ ನೀಡುವಂತಾಗಿ ಪರಿಸರದ ಬಗ್ಗೆ ಹೆಚ್ಚು ಗಮನ ನೀಡಲಿ ಎಂದರು.
ತಿಗಡ ಗ್ರಾಪಂ ಅಧ್ಯಕ್ಷೆ ಐಸಮ್ಮ, ಎನ್.ಜಿ. ರಮೇಶ್, ಪರಮೇಶ್ವರ್ ಪ್ರಾಚಾರ್ಯ ಅಲಿಸ್ ಡಿಕಾಸ್ಟ, ಡಾ. ಜಗದೀಶ್, ಪಿ.ಜಿ. ಶಿವಮೂರ್ತಿ ಭಾಗವಹಿಸಿದ್ದರು.
--