ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜ್ವಾಲಾಮಾಲಿನಿ ಜೇಸಿ ಸಂಸ್ಥೆಗೆ 8 ಪ್ರಶಸ್ತಿ: ಶೇಷಗಿರಿ

Lingaraj Badiger
Updated On : 16 Jul 2013, 10:56 am

ನರಸಿಂಹರಾಜಪುರ: ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಜೇಸಿ ವಲಯ 14ರ ಜೇಸಿ ಸಮ್ಮೇಳನದಲ್ಲಿ ಇಲ್ಲಿನ ಜ್ವಾಲಾಮಾಲಿನಿ ಜೇಸಿ ಸಂಸ್ಥೆಗೆ 8 ಪ್ರಶಸ್ತಿಗಳು ಲಭ್ಯವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎಸ್. ಶೇಷಗಿರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇಸಿ 14ರ ವಲಯ ಮಟ್ಟದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯು ದ್ವಿತೀಯ ಸ್ಥಾನದಲ್ಲಿದೆ. ಮಲೆನಾಡಿನಲ್ಲಿರುವ ಜೇಸಿ ಸಂಸ್ಥೆಗಳಿಗೂ ನಗರ ಪ್ರದೇಶದ ಜೇಸಿ ಸಂಸ್ಥೆಗಳಿಗೂ ವ್ಯತ್ಯಾಸ ಇದ್ದು ಮಲೆನಾಡಿನ ಜೇಸಿ ಘಟಕಗಳಿಗೆ ನಿಯಮಗಳನ್ನು ಬದಲಾಯಿಸುವಂತೆ ಜೇಸಿ 14ರ ವಲಯಾಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಈ ವರ್ಷ 6 ತಿಂಗಳು ಮುಗಿಸಲಾಗಿದ್ದು, ಸಮಾಜಕ್ಕೆ ಪೂರಕವಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆವು.ಉಚಿತ ನೇತ್ರ ತಪಾಸಣೆ ನಡೆಸಲಾಗಿದೆ. ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ, ಕ್ಯಾನ್ಸರ್ ತಪಾಸಣೆ, ಮಲೇರಿಯಾ, ಡೆಂಘೀ ಜ್ವರದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು ಎಂದು ವಿವರಿಸಿದರು. ಮುಂದಿನ 6 ತಿಂಗಳಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಅವುಗಳಲ್ಲಿ ಮುಖ್ಯವಾಗಿ ಶಾಲಾ ಮಕ್ಕಳಿಗೆ ದಂತ ತಪಾಸಣೆ, ಆ.15ರಂದು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಆಹಾರ ಸಾಮಾಗ್ರಿ ವಿತರಣೆ ಹಾಗೂ ಬಟ್ಟೆ ವಿತರಿಸಲಾಗುವುದು ಸೇರಿದಂತೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷ ವರ್ಕಾಟೆ ಸುಧಾಕರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement