ಕಾಯಂ ನ್ಯಾಯಧೀಶರ ನೇಮಕಕ್ಕೆ ಆಗ್ರಹ
ನರಸಿಂಹರಾಜಪುರ: ಶತಮಾನದ ಇತಿಹಾಸ ಇರುವ ಇಲ್ಲಿನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್. ಸಿ ನ್ಯಾಯಾಲಯದಲ್ಲಿ ಖಾಯಂ ನ್ಯಾಯಧೀಶರಿಲ್ಲದೆ ನ್ಯಾಯದಾನದಲ್ಲಿ ವಿಳಂಬವಾಗುತ್ತಿದ್ದು, ಖಾಯಂ ನ್ಯಾಯಧೀಶರನ್ನು ನೇಮಿಸಬೇಕು ಎಂದು ಕಕ್ಷಿದಾರರು ಒತ್ತಾಯಿಸಿದ್ದಾರೆ.
ಕಳೆದ 2 ವರ್ಷದಿಂದಲೂ ಈ ನ್ಯಾಯಾಲಯಕ್ಕೆ ಖಾಯಂ ನ್ಯಾಯಧೀಶರಿಲ್ಲ. ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ನ್ಯಾಯಾಲಯಕ್ಕೆ ಒಬ್ಬರೇ ನ್ಯಾಯಧೀಶರು ಕೆಲಸ ಮಾಡಬೇಕಾಗಿದೆ. ಇದರಿಂದ ಕಕ್ಷಿದಾರರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸರ್ಕಾರ ಹಾಗೂ ಉಚ್ಚ ನ್ಯಾಯಾಲಯ ತಕ್ಷಣ ಗಮನಹರಿಸಿ ಇಲ್ಲಿನ ನ್ಯಾಯಾಲಯಕ್ಕೆ ಖಾಯಂ ನ್ಯಾಯಧೀಶರನ್ನು ನೇಮಿಸಬೇಕು ಎಂದು ಕಕ್ಷಿದಾರರು ಆಗ್ರಹಿಸಿದ್ದಾರೆ.
ಸೇವೆಯಿಂದ ವಜಾ
ಶೃಂಗೇರಿ: ಅಪರಾಧ ಹಿನ್ನೆಲೆ ಹೊಂದಿರುವ ಕಾರಣದಿಂದ ಗೃಹ ರಕ್ಷಕ ದಳ ತಾಲೂಕು ಘಟಕದ ಎಂ.ಎಂ. ನವೀನ್ ಅವರನ್ನು ಕೇಂದ್ರ ಕಚೇರಿಯ ಆದೇಶದ ಮೇರೆಗೆ ಗೃಹರಕ್ಷಕ ದಳದ ಸದಸ್ಯತ್ವದಿಂದ ಸಮಾಪನಗೊಳಿಸಲಾಗಿದೆ.
ಜಿಲ್ಲಾ ಹೋಮ್ ಗಾರ್ಡ್ ಕಮಾಂಡೆಂಟ್ ಈ ಸಮಾಪನಾ ಆದೇಶ ಹೊರಡಿಸಿದ್ದಾರೆ.