ತರೀಕೆರೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕ.ಪ್ರ.ವಾರ್ತೆ, ತರೀಕೆರೆ, ಜು. 16 ಒಡನಾಡಿ ಸೇವಾ ಸಂಸ್ಥೆ ವತಿಯಿಂದ ಮಂಗಳವಾರ ಸ.ಕಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿಶ್ವ ಜನಸಂಖ್ಯಾ ದಿನಾಚರಣೆ ಏರ್ಪಡಿಸಲಾಗಿತ್ತು.
ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಎಂ. ವೆಂಕಟೇಶ್ ಮಾತನಾಡಿ, ಜನಸಂಖ್ಯೆ ನಿಯಂತ್ರಣ ಮಾಡದ ಹೊರತು ಪರಿಸರ ರಕ್ಷಣೆ ಅಸಾಧ್ಯ ಎಂದು ತಿಳಿಸಿದರು.
ಪೂರಕ: ಡಾ.ಜಿ.ಸಿ.ಶರತ್ ಮಾತನಾಡಿ, ಪರಿಸರ ಹಾಗೂ ಜನಸಂಖ್ಯೆ ಎರಡೂ ಒಂದಕ್ಕೊಂದು ಪೂರಕವಾಗಿದ್ದು, ಮನುಷ್ಯ ಪ್ರಕೃತಿ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾನೆ, ಪ್ರಾಕೃತಿಕ ಸಂಪತ್ತನ್ನು ಮಿತವಾಗಿ ಬಳಸದಿದ್ದರೆ, ಮುಂದಿನ ಸಂತತಿಗೆ ಪ್ರಕೃತಿ ಸಂಪತ್ತು ಉಳಿಯುವುದು ಅಸಾಧ್ಯ ಎಂದು ತಿಳಿಸಿದರು.
ಯುವ ಕವಿ ದಾದಪೀರ್ ಮಾತನಾಡಿ, ಉತ್ತಮ ಪರಿಸರ ಹಾಗೂ ಸ್ವಚ್ಛತೆ ಉತ್ತಮ ಆರೋಗ್ಯಕ್ಕೆ ದಾರಿಯಾಗಿದೆ. ಜನಸಂಖ್ಯೆಯ ವಿಪರೀತ ಹೆಚ್ಚಳ ಸಾಮಾಜಿಕ ಅಸಮತೋಲನಕ್ಕೆ ದಾರಿಯಾಗಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಸುನೀತಾ ಗಂಗಾಧರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯೋಪಾಧ್ಯಾಯಿನಿ ವಿಜಯ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಹೇಮಲತಾ ರೇವಣ್ಣ, ಸಿದ್ರಾಮಪ್ಪ, ಒಡನಾಡಿ ಸೇವಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸಂತೋಷ್ ಇದ್ದರು.