ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಸಂಖ್ಯಾ ಸ್ಫೋಟ ಅಪಾಯಕಾರಿ

Lingaraj Badiger
Updated On : 18 Jul 2013, 10:57 am

ನರಸಿಂಹರಾಜಪುರ: ಜಾಗತೀಕರಣದ ಪರಿಣಾಮ ದೇಶದ ಕುಟಂಬ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಅಗಿದ್ದು, ಅವಿಭಕ್ತ ಕುಟುಂಬಗಳು ಒಡೆದು ಚೂರಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಉಮೇಶ್ ವಿಷಾದ ವ್ಯಕ್ತಪಡಿಸಿದರು.
ಅವರು ಬುಧವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಾಡಿದರು.
ಶೇ.17 ಭಾರತದ ಜನಸಂಖ್ಯೆ: ವಿಶ್ವದ ಜನಸಂಖ್ಯೆಯಲ್ಲಿ ಶೇ. 17 ಭಾರತದ ಜನಸಂಖ್ಯೆ ಇದೆ. 1950 ರ ಸುಮಾರಿಗೆ ಭಾರತ ದೇಶದಲ್ಲಿ ಒಂದು ಕುಟಂಬಕ್ಕೆ 2 ಮಕ್ಕಳು ಎಂದು ಘೋಷಣೆ ಮಾಡಲಾಗಿತ್ತು. ಈಗ ಒಂದು ಕುಟಂಬಕ್ಕೆ ಒಂದೇ ಮಗು ಎಂದು ತಂದೆ, ತಾಯಿಗಳೇ ನಿರ್ಧರಿಸುತ್ತಿದ್ದಾರೆ ಎಂದರು.
ಜನಸಂಖ್ಯೆ ಸ್ಫೋಟದಿಂದಾಗಿ ಭಾರತದಲ್ಲಿ ಸಾಮಾಜಿಕ, ಆರ್ಥಿಕ, ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಜನಸಂಖ್ಯೆ ಶಿಕ್ಷಣ, ಜಾಗೃತಿ ಮೂಡಿಸುವುದೇ ಇದಕ್ಕಿರುವ ಪರಿಹಾರವಾಗಿದೆ. ಸಾಂಪ್ರದಾಯಿಕ ಕುಟಂಬಗಳಲ್ಲಿ ಗಂಡು ಮಗು ಬೇಕೇ ಬೇಕು ಎಂಬ ಹಂಬಲವೂ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಪಂ ಉಪಾಧ್ಯಕ್ಷೆ ಸುಜಾತ ಸಮಾರಂಭ ಉದ್ಘಾಟಿಸಿ, ಆರೋಗ್ಯ ಕಾರ್ಯಕರ್ತೆಯರು ಮಹಿಳೆಯರಿಗೆ ಆರೋಗ್ಯದ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು. ಗರ್ಭಿಣಿಯರನ್ನು ತೇಜೋವಧೆ ಮಾಡದೆ ಸರಿಯಾದ ಮಾಹಿತಿ ನೀಡಬೇಕು.
 ವಿಶೇಷವಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಮಹಿಳೆಯರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಜನಸಂಖ್ಯಾ ದಿನ: ತಾಲೂಕು ವೈದ್ಯಾಧಿಕಾರಿ ಡಾ. ಸೀಮಾ ಪ್ರಾಸ್ತಾವಿಕವಾಗಿ ಮಾತನಾಡಿ, 1987 ರ ಜುಲೈ 11 ರಲ್ಲಿ ವಿಶ್ವದ ಜನಸಂಖ್ಯೆ 500 ಕೋಟಿ ಮುಟ್ಟಿದ್ದರಿಂದ ಇಡೀ ವಿಶ್ವದಲ್ಲೇ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 1951 ರ ಸುಮಾರಿಗೆ 1 ಕೋಟಿ 94 ಲಕ್ಷ ಜನಸಂಖ್ಯೆ ಇತ್ತು. 2011 ರ ಜನಗಣತಿ ಪ್ರಕಾರ 6 ಕೋಟಿ 11 ಲಕ್ಷ ದಾಟಿದೆ. ಪ್ರತಿ ವರ್ಷ 8 ಲಕ್ಷ ಜನಸಂಖ್ಯೆ ಏರುತ್ತಿದೆ. 1 ನಿಮಿಷಕ್ಕೆ 29 ಮಕ್ಕಳ ಜನನವಾಗುತ್ತಿದೆ.
 ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದೇ ವಿಶ್ವ ಜನಸಂಖ್ಯಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಸುಮಿತ್ರ, ಸದಸ್ಯ  ಮಂಜಪ್ಪಗೌಡ, ಉಮಾ, ತಹಸೀಲ್ದಾರ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಣ್ಣ ಕುಟಂಬದಿಂದಾಗುವ ಪ್ರಯೋಜನ ಹಾಗೂ ದೊಡ್ಡ ಕುಟುಂಬದಿಂದ ಆಗುವ ತೊಂದರೆ ಬಗ್ಗೆ ಪ್ರಹಸನ ನಡೆಸಿದರು.
ಗಾಯತ್ರಿ ಪ್ರಾರ್ಥಿಸಿದರು. ಪಿ. ಪ್ರಭಾಕರ್ ಸ್ವಾಗತಿಸಿದರು. ಲಲಿತ ಕಾರ್ಯಕ್ರಮ ನಿರೂಪಿಸಿದರು. ಬೇಬಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement