ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೀರೇಂದ್ರ ಹೆಗ್ಗಡೆ ಭೇಟಿ ಇಂದು

Lingaraj Badiger
Updated On : 18 Jul 2013, 11:03 am

ಕಡೂರು:  ತಾಲೂಕಿಗೆ ಜು.18ರಂದು ಧರ್ಮಸ್ಥಳ ಯೋಜನೆಯ ಮುಖ್ಯಸ್ಥ ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಯೋಜನೆಯಿಂದ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯೋಜನೆ ತಾಲೂಕು ಸಂಚಾಲಕ ದಿನೇಶ್ ತಿಳಿಸಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಕಡೂರು ತಾಲೂಕಿನ ಗರ್ಜೆಯಲ್ಲಿ ಪ್ರಗತಿ ಬಂಧು ಒಕ್ಕೂಟ, ಸ್ವ ಸಹಾಯ ಸಂಘಗಳಿಗೆ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಘಟಕ ವೀಕ್ಷಣೆ: ಅಲ್ಲಿಂದ ಮಾದಾಪುರ ಮಠದಿಂದ ಯಳ್ಳಂಬಳಸೆ ಮಾರ್ಗವಾಗಿ ಸಿಂಗಟಗೆರೆಯ ಶುದ್ಧಗಂಗಾ ಘಟಕವನ್ನು ವೀಕ್ಷಿಸಲಿದ್ದಾರೆ. ಆನಂತರ ಕಲ್ಲೇಶ್ವರಸ್ವಾಮಿಯವರ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದ ಸಮುದಾಯ ಭವನದಲ್ಲಿ ಪ್ರಗತಿ ಬಂಧು ಮತ್ತು ಸ್ವ ಸಹಾಯ ಸಂಘಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement