ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವ್ಯಕ್ತಿತ್ವ ರೂಪಿಸಲು ಶಿಕ್ಷಣ ಸಹಕಾರಿ

Lingaraj Badiger
Updated On : 18 Jul 2013, 10:58 am

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಜು.17
ಯಾವುದೇ ವಿದ್ಯಾರ್ಥಿಯಾಗಿರಲಿ ಪ್ರತಿಯೊಂದು ವಿಚಾರದಲ್ಲಿ ಆಸಕ್ತಿ ಹೊಂದಿರಬೇಕು. ಆಸಕ್ತಿ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಕನ್ನಡ ಪೂಜಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರೇಮಗಳೂರು ಕಣ್ಣನ್ ಹೇಳಿದರು.
ಹಿರೇಮಗಳೂರಿನ ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ಜಾಗೃತಿ ವೇದಿಕೆ ಇತ್ತೀಚೆಗೆ ಏರ್ಪಡಿಸಿದ್ದ ಎಸ್ಸೆಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗೈಯಲು ಕಾರಣಕರ್ತರಾದ ಶಿಕ್ಷಕರನ್ನು ಅಭಿನಂದಿಸುವ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕಲಿಕೆಯಲ್ಲಿ ಆಸಕ್ತಿ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು. ಶಿಕ್ಷಣ ವ್ಯಕ್ತಿತ್ವ ಗಟ್ಟಿಗೊಳಿಸುತ್ತದೆ. ಸತತ ಪ್ರಯತ್ನದ ಮೂಲಕ ವಿದ್ಯಾರ್ಥಿಗಳು ಸಾಧನೆಗೆ ಮುಂದಾಗಬೇಕು ಎಂದರು.
ಶಿಕ್ಷಕರನ್ನು ಗೌರವಿಸಿ ಮಾತನಾಡಿದ ನಗರಸಭಾ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಕ್ರಿಯಾಶೀಲತೆ, ನಿರ್ದಿಷ್ಟ ಗುರಿ ಹೊಂದಿದ್ದರೆ ಬದುಕಿನಲ್ಲಿ ಅಗಾಧವಾದದ್ದನ್ನು ಸಾಧಿಸಬಹುದು ಎಂದರು.
ಹಿರಿಯರು, ಗುರುಗಳು, ತಂದೆ ತಾಯಂದಿರವನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ತಾವು ಓದಿದ ಶಾಲೆಗಳನ್ನು ಎಂದೂ ಮರೆಯಬಾರದು. ಉತ್ತಮ ಸ್ಥಿತಿ ತಲುಪಿದ ನಂತರದಲ್ಲಿ ಓದಿದ ಶಾಲಾ ಕಾಲೇಜುಗಳಿಗೆ ಕೈಲಾದ ಸಹಾಯ ಮಾಡಬೇಕು ಎಂದು ಸಲಹೆ ಮಾಡಿದರು.
ವ್ಯಕ್ತಿತ್ವ ರೂಪಿಸಲು ಸಹಕಾರಿ: ರಾಷ್ಟ್ರೀಯ ಭಾವೈಕ್ಯತಾ ಜಾಗೃತಿ ವೇದಿಕೆ ಅಧ್ಯಕ್ಷ ರಮೇಶ್ ಬೊಂಗಾಳೆ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿಕ್ಷಣ ಸಹಕಾರಿಯಾಗುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಕೆ ಮತ್ತು ಆತ್ಮ ವಿಮರ್ಶೆಯಿಂದ ಜಾಗೃತರಾಗಲು ಶಿಕ್ಷಣ ಸಹಕಾರಿಯಾಗುತ್ತದೆ. ಗುರಿಯೊಂದಿಗೆ ವಿದ್ಯಾರ್ಥಿಗಳು ಮುಂದಡಿ ಇಡಬೇಕು ಎಂದು ಸಲಹೆ ಮಾಡಿದರು.
ರಾಷ್ಟ್ರೀಯ ಭಾವೈಕ್ಯತಾ ಜಾಗೃತಿ ವೇದಿಕೆ ಉಪಾಧ್ಯಕ್ಷ ಎ.ಎಸ್. ರಾಘವೇಂದ್ರ ಮಾತನಾಡಿ,  ದೇಶದಲ್ಲಿ ಸ್ವಾರ್ಥ, ಅಪ್ರಾಮಾಣಿಕತೆ ಮತ್ತು ಅರಾಜಕತೆ ಇರುವುದರಿಂದಾಗಿ ಭ್ರಷ್ಟಾಚಾರ ವ್ಯಾಪಕವಾಗಲು ಕಾರಣವಾಗಿದೆ. ಮನುಷ್ಯನ ಬದುಕು ಹುಟ್ಟಿನೊಂದಿಗೆ ಗಿಡಮರಗಳು ಅವಲಂಬಿತವಾಗಿದೆ ಎಂದು ಹೇಳಿದರು.
ಶ್ರೀದೇವಿ ಯುವಕ ಸಂಘ ಅಧ್ಯಕ್ಷೆ ಶ್ರೀದೇವಿ ಮೋಹನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಲ್.ವಿ.ಬಸವರಾಜು, ಅಭಿನಂದನೆ ಸ್ವೀಕರಿಸಿದ ಮುಖ್ಯ ಶಿಕ್ಷಕ ಸಿ.ಪಿ. ಶ್ರೀಧರ್ ಮಾತನಾಡಿದರು.
ಕೋಮಲ ಮತ್ತು ಅಖಿಲಾ ಪ್ರಾರ್ಥಿಸಿದರು. ಶಿಕ್ಷಕ ಮೃತ್ಯುಂಜಯಪ್ಪ ಸ್ವಾಗತಿಸಿದರು. ಶಿಕ್ಷಕ ಸುದರ್ಶನ್  ನಿರೂಪಿಸಿದರು, ಶಿಕ್ಷಕ ಲೋಕೇಶ್ ವಂದಿಸಿದರು. ಹಿರೇಮಗಳೂರು ಕಣ್ಣನ್ ವಿದರ್ನ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಿಹಿ ಹಂಚಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement