ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿಎಂಗೆ ಕ್ರೈಸ್ತ ಸಂಘ ಒಕ್ಕೂಟ ಶ್ಲಾಘನೆ

Lingaraj Badiger
Updated On : 18 Jul 2013, 10:58 am

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 100 ಕೋಟಿ ಹಣ ನೀಡಿರುವುದನ್ನು ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟದ ಸಹ ಸಂಚಾಲಕ ಜೇಮ್ಸ್ ಡಿ.ಸೋಜ ಸ್ವಾಗತಿಸಿದ್ದಾರೆ.
ವಸತಿ ರಹಿತ ಅಲ್ಪಸಂಖ್ಯಾಂತರಿಗೆ ನಿವೇಶನ ಖರೀದಿ ಹಾಗೂ ಗೃಹ ಸಾಲಕ್ಕಾಗಿ ಹೊಸ ಯೋಜನೆ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನ ಮತ್ತು ಪರಿಹಾರ, ಭೋದನೆ ಯೋಜನೆಗೆ 6.50 ಕೋಟಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಲ್ಪಸಂಖ್ಯಾಂತರ ಕಲ್ಯಾಣ ಕೋಶ ಸ್ಥಾಪನೆಗೆ ಮುಖ್ಯಮಂತ್ರಿಗಳು ತಮ್ಮ ಬಜೆಟ್ ಘೋಷಿಸಿರುವುದರಿಂದ ಹಲವು ಸೌಲಭ್ಯ ಪಡೆದುಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಕ್ಕೂಟದ ರಾಜ್ಯ ಅಧ್ಯಕ್ಷರಾದ ರೊನಾಲ್ಡ್ ಕೊಲಾಸೊ ಅವರು ನಿಯೋಗದೊಂದಿಗೆ ಸಿಎಂ ಭೇಟಿ ಮಾಡಿ ಸಮುದಾಯಕ್ಕೆ ಅನುದಾನ ಹಾಗೂ ಪ್ರತ್ಯೇಕ ನಿಗಮ ರಚಿಸಲು  ಮನವಿ ಸಲ್ಲಿಸಿದ್ದರು ಎಂದಿದ್ದಾರೆ.

ತೋಟಗಾರಿಕಾ ಇಲಾಖೆ: ಅರ್ಜಿ ಆಹ್ವಾನ
ನರಸಿಂಹರಾಜಪುರ: 2013-14 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮಗ್ರ ಕೀಟ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ ಯೋಜನೆಗೆ ಅರ್ಜಿ ಆಹ್ವಾನಿಸಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
 ಅರ್ಜಿಗಳನ್ನು ಸಂಪೂರ್ಣ ಭರ್ತಿ ಮಾಡಿ ಸೂಚಿತ ದಾಖಲಾತಿಯೊಂದಿಗೆ ದ್ವಿಪ್ರತಿಯಲ್ಲಿ 26-7-2013 ರೊಳಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ನರಸಿಂಹರಾಜಪುರ ಕಚೇರಿಗೆ ಸಲ್ಲಿಸಬಹುದು. ತಾಲೂಕಿಗೆ ಒಟ್ಟು ರು. 3 ಲಕ್ಷದ ಗುರಿ ಇದ್ದು ಪ.ಜಾತಿ,ಪ.ಪಂಗಡ,ಅಲ್ಪ ಸಂಖ್ಯಾತರು ಹಾಗೂ ವಿಕಲ ಚೇತನರು, ಮಹಿಳೆಯರಿಗೆ ನಿಯಮಾನುಸಾರ ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಜೇಷ್ಠತೆ ಆಧಾರದ ಮೇಲೆ ಅರ್ಜಿ  ವಿಲೇವಾರಿ ಮಾಡಲಾಗುವುದು. ಸಲ್ಲಿಸಬೇಕಾದ ದಾಖಲಾತಿ: ಅರ್ಜಿ ನಮೂನೆ, ಪಾಸ್ ಪೋರ್ಟ್ ಸೈಜಿನ ಪೋಟೋ-2, ಮುಂಗಡ ಹಣದ ರಸೀದಿ, 2013-14 ನೇ ಸಾಲಿನ ಪಹಣಿ (ಪಹಣಿಯಲ್ಲಿ ಅಡಕೆ ಬೆಳೆ ಎಂದು ನಮೂದಾಗಿರಬೇಕು.
 ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು. (08266-220025)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement