ಅಪಘಾತ: 18 ತಿಂಗಳ ಮಗು ಸಾವು
ಕೊಪ್ಪ: ತಾಲೂಕಿನ ಶಾನುವಳ್ಳಿ ಗ್ರಾಮದ ಹೆಗ್ಗಾರು ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಬವಿಸಿದ ಪರಿಣಾಮ ಕಾರಿನಲ್ಲಿದ್ದ 18 ತಿಂಗಳ ಹೆಣ್ಣು ಮಗು (ಸಮನ್ವಿತಾ) ಸ್ಥಳದಲ್ಲೇ ಮತಪಟ್ಟಿದ್ದು, ಇನ್ನೂ ಐವರಿಗೆ ಗಾಯಗಳಾದ ಘಟನೆ ಗುರುವಾರ ಸಂಭವಿಸಿದೆ. ಕಾರಿನಲ್ಲಿದ್ದವರನ್ನು ಸಕ್ಕರಾಯಪಟ್ಟಣದ ಕಾರೇಹಳ್ಳಿ ನಿವಾಸಿಗಳೆಂದು ಗುರುತಿಸಲಾಗಿದ್ದು, ಇವರು ಆಗುಂಬೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಿತ್ತಿದ್ದರು. ಹೆಗ್ಗಾರು ಸಮೀಪದಲ್ಲಿ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಈ ಘಟನೆ ಸಂಭವಿಸಿದೆ. ಮೋಹನ್, ಅಂಬಿಕಾ, ಲತಾ, ಯಶಸ್ವಿನಿ, ಚಂದನ್ ಇವರಿಗೆ ಗಾಯಗಳಾಗಿವೆ. ಪ್ರಕರಣ ದಾಖಲಾಗಿದೆ.