ಎಂ.ಸಿ.ಹಳ್ಳಿಯಲ್ಲಿ ಕಿಶೋರಿ ದಿನಾಚರಣೆ
ತರೀಕೆರೆ: ಸಮೀಪದ ಎಂ.ಸಿ.ಹಳ್ಳಿಯಲ್ಲಿ ಕಿಶೋರಿ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮ ಅವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಕಿಶೋರಿಯರ ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಬೆಳವಣಿಗೆ ಬಗ್ಗೆ ಮಾತನಾಡಿದರು. ಯೋಜನಾಧಿಕಾರಿ ರಾಮಯ್ಯ ಅವರು ಸಬಲ ಯೋಜನೆ ಕುರಿತು ಮಾತನಾಡಿದರು.
ಮೇಲ್ವಿಚಾರಕಿ ಸುರೇಖ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಕಲಾ ಮತ್ತು ಎಂ.ಸಿ.ಹಳ್ಳಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಸಮಾರಂಭದಲ್ಲಿ ಭಾಗವಹಿಸಿದ್ದರು.ಕಿಶೋರಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.