ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಗತಿಯ ಪಾಲುದಾರರಾಗಿ

Lingaraj Badiger
Updated On : 19 Jul 2013, 11:28 am

ಕ.ಪ್ರ.ವಾರ್ತೆ, ತರೀಕೆರೆ, ಜ.18
ಮಹಿಳೆಯರು ಸಂಸಾರದ ಭಾರ ಹೊತ್ತರೆ ಅಭಿವೃದ್ದಿ ಸುಗಮವಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಅವರು ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ತರೀಕೆರೆ ತಾಲೂಕು ಶಾಖೆ ವತಿಯಿಂದ ಸಮೀಪದ ಶಿವನಿಯಲ್ಲಿ ಏರ್ಪಡಿಸಲಾಗಿದ್ದ ಯೋಜನೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಮಾರಂಭದಲ್ಲಿ ಮಾತನಾಡಿದರು.
ಪಾಲುದಾರರಾಗಿ: ಯೋಜನೆ ಸಮರ್ಪಕವಾಗಿ ಕಾರ್ಯಗತವಾದರೆ ಬದುಕು ಹಸನಾಗುತ್ತದೆ. ಹೈನುಗಾರಿಕೆ, ಕೃಷಿ ಅಭಿವೃದ್ಧಿ ಇತ್ಯಾದಿಗಳಲ್ಲಿ ಸರಿಯಾಗಿ ದುಡಿಮೆ ಮಾಡಬೇಕು. ಸ್ವಸಹಾಯ ಸಂಘಗಳಲ್ಲಿ ನೀವೇ ಹಕ್ಕುದಾರರು, ಫಲಾನುಭವಿಗಳಾಗಬೇಡಿ, ಬದಲಿಗೆ ಪ್ರಗತಿಯ ಪಾಲುದಾರರಾಗಬೇಕು. ವಿದ್ಯಾವಂತರು ಗ್ರಾಮದಲ್ಲೇ ನೆಲಸಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಯಕ್ರಮಗಳಿಂದ ಜನರಲ್ಲಿ ಪರಿವರ್ತನೆ ತಂದಿದ್ದಾರೆ,  ಜನರು ಸ್ವಾವಲಂಭಿಗಳಾಗಬೇಕು, ಹಣ ಉಳಿತಾಯ ಮಾಡಬೇಕು, ಶುದ್ದ ಕುಡಿಯುವ ನೀರಿನ ಸಂಗ್ರಹಣೆ ಮೆಚ್ಚುವಂತಹುದು, ರಾಜ್ಯದ ಎಲ್ಲ ಕಡೆ ಇಂತಹ ಶುದ್ದ  ನೀರಿನ ಘಟಕ ಸ್ಥಾಪನೆಯಾಗಬೇಕು ಎಂದು ಅವರು ತಿಳಿಸಿದರು.
ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ, ತಾಪಂ ಅಧ್ಯಕ್ಷೆ ಶಾಂತ ಗುರುಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಬಿ. ಆನಂದಪ್ಪ, ಯೋಜನಾಧಿಕಾರಿ ಮಹೇಶ್, ಸಂದೇಶ್, ಯೋಜನೆ ಸಿಬ್ಬಂದಿ, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement