ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

22 ರಂದು ಸರ್ಕಾರಿ ನೌಕರರ ಸಂಘದ ಚುನಾವಣೆ

Lingaraj Badiger
Updated On : 20 Jul 2013, 11:02 am

ಚಿಕ್ಕಮಗಳೂರು: ಜಿಲ್ಲಾ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘಗಳ ಪದಾಧಿಕಾರಿಗಳ ಸ್ಥಾನಗಳಿಗೆ ಜು. 22 ರಂದು ಚುನಾವಣೆ ನಡೆಯಲಿದೆ.14 ಇಲಾಖೆಗಳ 61 ಸ್ಥಾನಗಳಲ್ಲಿ ಈಗಾಗಲೇ 40 ಮಂದಿ ನೌಕರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 21 ಸ್ಥಾನಗಳಿಗೆ ಜು. 22 ರಂದು ಚುನಾವಣೆ ನಡೆಯಲಿದ್ದು, 42 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಕಡೂರು ತಾಲೂಕಿನ ಸರ್ಕಾರಿ ನೌಕರರ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯ ವಿಳಂಬವಾಗಿದ್ದರಿಂದ ಜು. 29 ರಂದು ಚುನಾವಣೆ ನಡೆಯಲಿದೆ.ಜು.22 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಬಳಿಕ ಮತದಾನ ಕೇಂದ್ರಗಳಲ್ಲಿಯೇ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್.ವಿ. ಸತ್ಯನಾರಾಯಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement