24 ನಿರ್ದೇಶಕರ ಅವಿರೋಧ ಆಯ್ಕೆ
ಕೊಪ್ಪ: ತಾಲೂಕಿನ ಸರ್ಕಾರಿ ನೌಕರ ಸಂಘದ 35 ನಿರ್ದೇಶಕ ಸ್ಥಾನಗಳಿಗೆ ಜು.22 ರಂದು ನಡೆಯುವ ಜುನಾವಣೆಗೆ ಒಟ್ಟು 42 ನಾಮ ಪತ್ರ ಸಲ್ಲಿಕೆಯಾಗಿದ್ದು ಇದರಲ್ಲಿ 24 ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿಯಾಗಿದ್ದರೆಂದು ಚುನಾವಣಾಧಿಕಾರಿ ಮಂಜುನಾಥ ತಿಳಿಸಿದ್ದಾರೆ.
35 ನಿರ್ದೇಶಕರ ಸ್ಥಾನಗಳ ಪೈಕಿಯಲ್ಲಿ ಅಬಕಾರಿ ಇಲಾಖೆಯನ್ನು ಹೊರತು ಪಡಿಸಿ ಉಳಿದೆಲ್ಲಾ 34 ನಿರ್ದೇಶಕರ ಸ್ಥಾನಗಳಿಗೆ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಇದರಲ್ಲಿ ಕಿರಿಯ ಮತ್ತು ಪ್ರಾಥಮಿಕ ಶಾಲೆಯ ವಿಭಾಗದ 5 ನಿರ್ದೇಶಕ ಸ್ಥಾನಗಳಿಗೆ, ಆರೋಗ್ಯ ಇಲಾಖೆ 4 ಸ್ಥಾನಗಳಿಗೆ, ಪಶುಸಂಗೋಪಾನೆ 1 ಸ್ಥಾನಗಳಿಗೆ, ಜು.22 ರಂದು ಬಾಳಗಡಿಯಲ್ಲಿ ಚುನಾವಣೆ ನಡೆಯಲಿದ್ದು, ಪ್ರೌಢ ಶಾಲಾ ವಿಭಾಗದಿಂದ ಆರ್. ರಾಜೇಶ್, ಪ್ರಥಮ ದರ್ಜೆ ಕಾಲೇಜಿನಿಂದ ಹೆಚ್.ಎಸ್. ಗಣಪತಿ, ನೋಂದಾವಣಿ ಇಲಾಖೆ ಯಿಂದ ಉಲ್ಲಸ್ ಬಾಬು, ಕಂದಾಯ ಇಲಾಖೆ ಯಿಂದ ರತ್ನಕಾರ್, ಸುಧೀರ್, ಭರತ್, ಜಿ.ಪಿ. ವಿನಯ್,ಅರಣ್ಯ ಇಲಾಖೆಯಿಂದ ಎಸ್. ಶಿವರುದ್ರಪ್ಪ, ವಿಜಕುಮಾರ್, ಎನ್. ಸುರೇಶ್, ಲೋಕೋಪಾಯೋಗಿ ಮತ್ತು ಜಿಲ್ಲಾ ಪಂಚಾಯತ್ ವಿಭಾಗದಿಂದ ರಾಜೇಶ್ ಮತ್ತು ಶಿವಲಿಂಗಪ್ಪ, ತಾಲೂಕು ಪಂಚಾಯತ್ನಿಂದ ಎನ್. ಗಂಗಾಧರ್, ಎ.ಕೆ. ಕಳಸಪ್ಪ, ಆಹಾರ ಇಲಾಖೆಯಿಂದ ಶ್ರೀಕಾಂತ್, ಭೂಮಪಾನ ಇಲಾಖೆಯಿಂದ ಟಿ.ಬಿ. ಮೂರ್ತಿ, ಖಜಾನೆ ಇಲಾಖೆ ಯಿಂದ ಹೆಚ್.ಎಂ. ಹುಲಿಯಪ್ಪ ಗೌಡ, ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಯಿಂದ ಚಂದ್ರಶೇಖರ್, ತೋಟಗಾರಿಗೆ ಮತ್ತು ಕೃಷಿ ಇಲಾಖೆ ಯಿಂದ ಟಿ.ಆರ್. ಸತ್ಯನಾರಾಯಣ್, ಶಿವಕುಮಾರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಚಂದ್ರಶೇಖರ್, ನ್ಯಾಯಾಂಗ ಇಲಾಖೆಯಿಂದ ರವಿಕುಮಾರ್, ಸಾಹಕಾರಿ ಮತ್ತು ಎಪಿಎಂಸಿ ಯಿಂದ ತಿಮ್ಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಡಿ.ಜೆ. ನಿಂಗರಾಜ್ ಇವರುಗಳು ಆಯಾ ಇಲಾಖೆಗಳ ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿ ಅಯ್ಕೆಯಾಗಿದ್ದಾರೆ ಎಂದು ತಿಳಿಸಿದರು.