ಅಪರಿಚಿತ ಮಹಿಳೆಯ ಶವ ಪತ್ತೆ
ಬೀರೂರು: ಸಮೀಪದ ಬಾಕಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು 45 ವರ್ಷ ವಯಸ್ಸಿನ ಮಹಿಳೆಯ ಶವವಾಗಿದ್ದು, ಮೃತರ ಬಗ್ಗೆ ವಿವರ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಬೀರೂರು ಪೊಲೀಸರು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ಶವ ಸಂಸ್ಕಾರ ನೆರವೇರಿಸಿದ್ದು, ಕಾಣೆಯಾಗಿರುವ ಮಹಿಳೆಯರ ಸಂಭಂದಿಕರು ಬೀರೂರು ಪೊಲೀಸ್ ಠಾಣೆಗೆ ಭೇಟಿ ನೀಡಲು ಕೋರಿದ್ದಾರೆ.
ಅಪಘಾತ: ಗಾಯ
ಶೃಂಗೇರಿ: ಮಂಗಳೂರು ಶಿವಮೊಗ್ಗ ರಾ.ಹೆ.13 ರ ಕೆರೆಕಟ್ಟೆ ಬಳಿ ಮಾರುತಿ ಓಮಿನಿಗೆ ಲಾರಿ ಅಪ್ಪಳಿಸಿ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರ್ಗೆ ಶೃಂಗೇರಿ ಕಡೆಯಿಂದ ಹೋಗುತ್ತಿದ್ದ ಲಾರಿ ಅಪ್ಪಳಿಸಿದಾಗ ಕಾರಿನಲ್ಲಿದ್ದ ಮಂಗಳೂರು ಮೂಲದ ವಿಶ್ವಾಸ್ (50) ಹಾಗೂ ಸದಾನಂದ (70) ತೀವ್ರವಾಗಿ ಗಾಯಗೊಂಡರು.