ಕನ್ನಡಿಗರ ಭಾವನೆಗೆ ದಕ್ಕೆ
ಮೂಡಿಗೆರೆ: ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಭಾವಚಿತ್ರವನ್ನು ವಿಧಾನಸೌಧ ಕಚೇರಿಯಿಂದ ತೆಗೆಸಿರುವುದು ಕನ್ನಡಿಗರ ಭಾವನೆಗೆ ದಕ್ಕೆಯುಂಟಾಗಿದೆ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಆರ್. ಉಮಾಪತಿ ತಿಳಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿ ತಮ್ಮ ಕೊಠಡಿಯಲ್ಲಿದ್ದ ಮಾಜಿ ಪ್ರಧಾನಿಗಳ ಭಾವ ಚಿತ್ರವನ್ನು ತೆರವುಗೊಳಿಸಿರುವುದನ್ನು ಗಮನಿಸಿದರೆ ಸರ್ಕಾರ ನಡೆಸುವ ಬದಲು ಜಾತಿ ರಾಜಕೀಯ ಮಾಡಲು ಹೊರಟಂತಿದೆ ಎಂದರು. ಮುಂದೆ ಇಂತಹ ಘಟನೆಗಳು ಮರುಕಳಿಸಿದರೆ ಜೆಡಿಎಸ್ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಲಕೃಷ್ಣೇಗೌಡ ಮಾತನಾಡಿ, ಅಕ್ಕಿ ಬೆಲೆ ಗಗನ್ನಕೇರಿದರೆ ರಾಜ್ಯದಲ್ಲಿ 1ರು.ಗೆ ಅಕ್ಕಿ ನೀಡಿ ಜನರನ್ನು ಸೋಮಾರಿಗಳನ್ನಾಗಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ ಎಂದರು. ವಿಜೇಂದ್ರ, ನಾಗೇಂದ್ರ, ಲೋಹಿತ್, ದೇವರಾಜ್, ಗಬ್ಬಳ್ಳಿ ಚಂದ್ರೇಗೌಡ, ರಾಮಣ್ಣ, ಎಂ.ಕೆ. ರವಿ ಇದ್ದರು.