ಕಾರ್ಮೆಲ್ ಮಾತೆ ದಿನಾಚರಣೆ
ನರಸಿಂಹರಾಜಪುರ: ಪ್ರಸ್ತುತ ಯುವ ಜನಾಂಗ ದುಷ್ಟ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಸಂತ ಮೇರಿ ಮಾತೆಯ ಗುಣಗಳನ್ನು ಬೆಳೆಸಿಕೊಂಡರೆ ಶಾಂತಿಯುತವಾಗಿ ಜೀವನ ಮಾಡಲು ಸಾದ್ಯವಾಗುತ್ತದೆ ಎಂದು ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಮಲ್ಸ್ ಮರಿಯಾ ಹೇಳಿದರು.
ಅವರು ಮೆಣಸೂರು ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಮೆಲ್ ಮಾತೆಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ಲವರ್ ರೂರಲ್ ಕ್ಲಬ್ ಅಧ್ಯಕ್ಷ ಜೋಯಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ರೋಸಿನಾ ಮಾತನಾಡಿದರು. ಉಪನ್ಯಾಸಕ ಟಿ. ಮಂಜುನಾಥ್, ನಾಗರಾಜ್ ಉಪಸ್ಥಿತರಿದ್ದರು. ಕಾರ್ಮೆಲ್ ಶಾಲೆಯ ಶಿಕ್ಷಕಿ ಡಯನಾ ಮಾತನಾಡಿದರು.
ಮಿಲನ ಸ್ವಾಗತಿಸಿದರು. ಮೋನಿಕಾ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕದಂಬ ತಂಡ ಪ್ರಥಮ, ಗಂಗ ತಂಡ ದ್ವಿತೀಯ ಹಾಗೂ ಚಾಣಕ್ಯ ತಂಡ ತೃತೀಯ ಸ್ಥಾನ ಪಡೆಯಿತು.