ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆ.2 ರಂದು ನೌಕರರ ಸಂಘದ ಚುನಾವಣೆ

Lingaraj Badiger
Updated On : 22 Jul 2013, 10:49 am

ಕಡೂರು: ಕಾರಣಾಂತರಗಳಿಂದ ಮುಂದೂಡಲಾಗಿದ್ದ ಕಡೂರು ತಾಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯು ಆಗಸ್ಟ್ 2 ರಂದು ನಡೆಯಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ಚನ್ನಪ್ಪ ಇಂಗ್ಲಳ್ಳಿ ತಿಳಿಸಿದರು.
ಅವರು ಕಡೂರು ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಂಘದ ಆದೇಶದ ಮೇರೆಗೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಇದೇ ಜುಲೈ 22 ರಿಂದ 26 ರವರೆಗೆ ನಾಮಪತ್ರ ವಿತರಣೆ ಮತ್ತು ಸಲ್ಲಿಸಬಹುದಾಗಿದೆ. ಆಗಸ್ಟ್ 2ರ ಶುಕ್ರವಾರ ಬೆಳಿಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಚುನಾವಣೆಯು ಆಯಾ ಇಲಾಖಾ ವ್ಯಾಪ್ತಿಯಲ್ಲಿ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ ಎಂದರು.
 ತಾಲೂಕಿನ 26 ಇಲಾಖೆಗಳಿಂದ ಒಟ್ಟು 35 ನಿರ್ದೇಶಕರ ಸ್ಥಾನಕ್ಕೆ ಸದಸ್ಯತ್ವ ಶುಲ್ಕ ಪಾವತಿಸಿದ 2637 ನೌಕರರು ಮತದಾನ ಮಾಡಲಿದ್ದಾರೆ. ಚುನಾವಣೆಯ ಅಧಿಕಾರಿಗಳಾಗಿ ಉಪನ್ಯಾಸಕರಾದ ಸಿ.ಮಹಾಲಿಂಗಯ್ಯ, ಎಂ.ಪಿ. ಗೌವಣ್ಣನವರ್ ಅವರನ್ನು ನೇಮಕ ಮಾಡಲಾಗಿದೆ. ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆಗೆ ಆಗಸ್ಟ್ 10 ರಂದು ಚುನಾವಣೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನೌಕರರಾದ ರಂಗಾಥ್, ಎನ್.ಎಸ್. ಬಸವರಾಜು, ಮಲ್ಲಪ್ಪ, ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ಮತ್ತಿತರರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement