ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲೆಕ್ಕ ಪರಿಶೋಧಕರ ಆಯ್ಕೆಗೆ ಸೂಚನೆ

Lingaraj Badiger
Updated On : 22 Jul 2013, 10:44 am

ಚಿಕ್ಕಮಗಳೂರು: ರಾಜ್ಯದ ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಮಾಡುವ ಸಲುವಾಗಿ ಪ್ರತಿ ಸಂಘಕ್ಕೆ ಮೂರು ಜನರ ಲೆಕ್ಕ ಪರಿಶೋಧಕರನ್ನು ಇಲಾಖೆವತಿಯಿಂದ 2013ರ ಏಪ್ರಿಲ್ 6, 9 ಮತ್ತು 16 ರಂದು ನೀಡಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಾಗಿದ್ದು, ಈ ಸಂಬಂಧ ಜುಲೈ 5 ರಂದು ಹೈಕೋರ್ಟ್ ಧಾರವಾಡ ಪೀಠದಲ್ಲಿ ತೀರ್ಪು ಬಂದಿದೆ.
ತೀರ್ಪಿನನ್ವಯ ಕಳೆದ ಜು.10ರಂದು ಪ್ರಕಟಿಸಲಾಗಿರುವ ಸಹಕಾರ ಸಂಘಗಳ ನಿಯಮಗಳ ನಿಯಮ 29 (ಬಿ) (3)ರನ್ವಯ ಸಹಕಾರ ಸಂಘಗಳು ಆಯಾ ಗುಂಪಿನ ಅರ್ಹ ಲೆಕ್ಕಪರಿಶೋಧಕರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಈ ಪ್ರಕಾರವಾಗಿ ರಾಜ್ಯದಲ್ಲಿರುವ ಸಹಕಾರ ಸಂಘಗಳನ್ನು ಎ, ಬಿ ಮತ್ತು ಸಿ ಗುಂಪುಗಳನ್ನಾಗಿ ಮಾಡಲಾಗಿದ್ದು, ಅದೇ ಪ್ರಕಾರವಾಗಿ ಆಯಾ ಗುಂಪಿನ ಸಹಕಾರ ಸಂಘಗಳನ್ನು ಲೆಕ್ಕ ಪರಿಶೋಧನೆ ಮಾಡಲು ಅರ್ಹ ಲೆಕ್ಕ ಪರಿಶೋಧಕರ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಎಲ್ಲಾ ಸಹಕಾರ ಸಂಘಗಳು ಈ ಪಟ್ಟಿಯ ಪ್ರಕಾರವಾಗಿ ತಮ್ಮ ಸಂಸ್ಥೆಯ ಲೆಕ್ಕ ಪರಿಶೋಧನೆಯನ್ನು ನಿರ್ವಹಿಸಲು ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಂಡು ನಿಗದಿತ ಅವಧಿಯಲ್ಲಿ ತಮ್ಮ ಸಂಸ್ಥೆಯ ಲೆಕ್ಕ ಪರಿಶೋಧನೆಯನ್ನು ಮುಕ್ತಾಯಗೊಳಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement