ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆ.4ರಂದು ಪಶ್ಚಿಮಘಟ್ಟ ಉಳಿಸಿ ರಾಷ್ಟ್ರೀಯ ಸಮಾವೇಶ

Lingaraj Badiger
Updated On : 23 Jul 2013, 11:20 am

ಚಿಕ್ಕಮಗಳೂರು: ಗೋವಾದಲ್ಲಿ ಆ.4 ರಂದು ಪಶ್ಚಿಮಘಟ್ಟ ಉಳಿಸಿ ರಾಷ್ಟ್ರೀಯ ಸಮಾವೇಶ ನಡೆಯಲಿದೆ ಎಂದು ಪಶ್ಚಿಮಘಟ್ಟ ಉಳಿಸಿ ಸಮಿತಿಯ ರಾಜ್ಯ ಸಂಘಟಕ ಬಿ. ರುದ್ರಯ್ಯ ತಿಳಿಸಿದ್ದಾರೆ.
 ಸಮಾವೇಶವನ್ನು ವಿಜ್ಞಾನಿ ಮಾಧವ ಗಾಡ್ಗೀಳ್ ಉದ್ಘಾಟಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಶ್ಚಿಮಘಟ್ಟ ಪರಿಸರದಲ್ಲಿ ಕಳೆದ 50 ವರ್ಷಗಳಿಂದ ವಿನಾಶಕಾರಿ ಚಟುವಟಿಕೆಗಳು, ಅರಣ್ಯ ಮಾಫಿಯಾ, ಕಲ್ಲು ಗಣಿಗಾರಿಕೆ ಹಾಗೂ ಕಾರ್ಪೋರೇಟ್ ಮಾಫಿಯಾಗಳು ನಿರಂತರವಾಗಿ ಅರಣ್ಯ ಲೂಟಿ ಮಾಡುತ್ತಿವೆ. ಈ ಲೂಟಿಯನ್ನು  ವಿರೋಧಿಸಿ ನಡೆದ ಚಳವಳಿಯಿಂದಾಗಿ ಕೇಂದ್ರ ಸರ್ಕಾರ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಆಯೋಗ ರಚಿಸಿದ್ದು, ಈ ಆಯೋಗ 2011ರಲ್ಲಿ 510 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ ವರದಿಯ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕುವುದರ ಮೂಲಕ ಮಾಫಿಯಾಗಳ ಪರವಾದ ತೀರ್ಮಾನಕ್ಕೆ ಬದ್ಧವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ(ಎಂ) ಪಕ್ಷಗಳು ಕೂಡ ಗಾಡ್ಗೀಳ್ ವರದಿಯನ್ನು ವಿರೋಧಿಸಿವೆ. ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ಆಗಸ್ಟ್ 4 ರಂದು ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಪರಿಸರವಾದಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement