ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಧಾರ್ ಅವ್ಯವಸ್ಥೆ: ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ

Lingaraj Badiger
Updated On : 23 Jul 2013, 11:10 am

ಕೊಪ್ಪ: ಪಟ್ಟಣದಲ್ಲಿ ಕಳೆದ ಒಂದುವಾರ ಹಿಂದಿನಿಂದ ಪ್ರಾರಂಭವಾಗಿರುವ ಆಧಾರ್ ಕಾರ್ಡ್‌ನ ಅರ್ಜಿ ಸ್ವೀಕರಿಸುವ ಕೇಂದ್ರ ಈಗ ಅವ್ಯವಸ್ಥೆಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಕರವೇಯ ನಗರ ಘಟಕದ ಅಧ್ಯಕ್ಷ ಗುಂಡಣ್ಣ ಖಂಡಿಸಿದ್ದಾರೆ.
 ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡದೇ ಮಾರ್ಸ್ ಟೆಲಿಕಾಂ.ಪ್ರೈ ಕಂಪನಿಯ ಸಿಬ್ಬಂದಿಗಳು ಕಳೆದ ಒಂದುವಾರದಿಂದ ಇಲ್ಲಿನ ಪುರಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೂ ಕೂಡ ಇದುವರೆಗೆ ಬೆರಳಿಣಿಕೆಯ ಜನರಿಂದ ಅರ್ಜಿಯನ್ನು ಸ್ವೀಕರಿಸದಿರುವುದು ಇವರ ಕಾರ್ಯಕ್ಷಮತೆಗೆ ಕೈಗನ್ನಡಿ ಹಿಡಿದಂತೆ ಇದೆ ಎಂದು ಅವರು ತಿಳಿಸಿದ್ದಾರೆ.
 ಕೂಲಿಕಾರ್ಮಿಕರು ಮತ್ತು ಸಾರ್ವಜನಿಕರು ಇಲ್ಲಿಗೆ ಬಂದು ದಿನ ಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಸಂಬಂದಪಟ್ಟವರು ಆಧಾರ್ ಅರ್ಜಿ ಸ್ವೀಕರಿಸುವ ಕೇಂದ್ರದ ಬಗ್ಗೆ ಜನರಿಗೆ ಸೂಕ್ತ ಮಾಹಿತಿಯನ್ನು ನೀಡಿ, ಸಮಾರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement