ಆರ್ಎಸ್ಎಸ್ ಗುರುಪೂಜಾ ಕಾರ್ಯಕ್ರಮ
ತರೀಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಟ್ಟಣದ ಕಾಳಿಕಾಂಬ ಸಮುದಾಯ ಭವನದಲ್ಲಿ ಶ್ರೀ ಗುರುಪೂಜಾ ಕಾರ್ಯಕ್ರಮವನ್ನು
ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭೌದ್ದಿಕ್ ಸೀತಾರಾಮ್ ಅವರು ಮಾತನಾಡಿ, ಸ್ವಾರ್ಥ ರಹಿತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ಮನುಷ್ಯ ತಾನು ದುಡಿದ ಹಣದಲ್ಲಿ ಅಲ್ಪಾಂಶವಾದರೂ ಸಮಾಜಕ್ಕೆ ನೀಡುವಲ್ಲಿ ಮುಂದಾಗಬೇಕು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಾದ್ಯಂತ ಯಾವುದೇ ದೇಶ, ಧರ್ಮ, ಜಾತಿ ಬೇಧವಿಲ್ಲದೆ ಸಾವಿರಾರು ಸೇವಾ ಕೈಂಕರ್ಯದಲ್ಲಿ ತೊಡಗಿದೆ. ಹಿಂದುತ್ವ ಎಂದರೆ ಭಾರತೀಯತೆಯೇ ವಿನಹ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಹಿಂದುತ್ವ ಎಂಬುದು ಧರ್ಮವಲ್ಲ, ಅದು ಬದುಕಿನ ರೀತಿ ನೀತಿ ಎಂದು ಅವರು ತಿಳಿಸಿದರು.
ಮನುಷ್ಯ ತನ್ನ ಮೇಲೆ ವಿರೋಧ ವ್ಯಕ್ತವಾದಾಗ ಪುಟಿದೇಳುತ್ತಾನೆ, ಅದರಂತೆ ಯಾವ ಸಂದರ್ಭದಲ್ಲಿ ಸಂಘದ ಮೇಲೆ ಅಕ್ರಮಣ ನೆಡೆದಿದೆಯೋ ಆಗ ಸಂಘ ಮತ್ತು ಹಿಂದುತ್ವ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಂಡಿದೆ ಎಂದು ತಿಳಿಸಿದರು. ತಾಲೂಕು ಕಾರ್ಯವಾಹ ಓಂಕರಪ್ಪ, ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ, ಗುರುಮೂರ್ತಿ, ಪ್ರಕಾಶ್ ಮತ್ತು ಸಂಘದ ಸದಸ್ಯರು ಇದ್ದರು.
ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ
ಶೃಂಗೇರಿ: ಪಟ್ಟಣದ ಕೆರೆಆಂಜನೇಯ ಸ್ವಾಮಿ ಬೀದಿಯಲ್ಲಿ ವಿದ್ಯಾರ್ಥಿಯೊಬ್ಬ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪಟ್ಟಣದ ಖಾಸಗಿ ಕಾಲೋಜೊಂದರಲ್ಲಿ ಅಂತಿಮ ಪದವಿ ವ್ಯಾಸಂಗ ನಡೆಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದ ಪ್ರಮೋದ (22) ಕಳೆದ ಪರೀಕ್ಷೆಯ ಪಲಿತಾಂಶ ಪ್ರಕಟಗೊಂಡ ನಂತರ ಕಡಿಮೆ ಅಂಕ ಬಂದಿದೆ ಎಂದು ಬೇಸತ್ತು ತನ್ನ ಕೊಠಡಿಯಲ್ಲಿ ಮೈಲುತುತ್ತ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೆ ಶರಣಾಗಿದ್ದಾನೆ.
ಈತ ಉತ್ತಮ ಹಾಸ್ಯ ಕಲಾವಿದನಾಗಿದ್ದು ರಾಜ್ಯ, ಅಂತರಾಜ್ಯ ಮಟ್ಟದ ಸ್ಪರ್ದೆಗಳಲ್ಲಿ ಹಲವು ಪ್ರಶಸ್ತಿ ಗಳಿಸಿಕೊಂಡಿದ್ದನು. ಈತನ ನಿಧನಕ್ಕೆ ಅ.ನ.ಶೃ. ಹಾಸ್ಯಕಲಾ ಬಳಗದ ಪ್ರಧಾನ ಸಂಚಾಲಕ ಸುವಿ ಪ್ರಸನ್ನ ಸಂತಾಪ ವ್ಯಕ್ತಪಡಿಸಿದ್ದಾರೆ.