ತರೀಕೆರೆಯಲ್ಲಿ ಮುಂದುವರಿದ ಮಳೆ
ತರೀಕೆರೆ: ಕಳೆದ ನಾಲ್ಕು ದಿನಗಳಿಂದ ತರೀಕೆರೆ ಮತ್ತು ಸುತ್ತಮುತ್ತ ಹಗಲು ಮತ್ತು ರಾತ್ರಿ ಎಡಬಿಡದೆ ಸುರಿಯುತ್ತಿರುವ ಮಳೆ ಸೋಮವಾರ ಕೂಡ ಮುಂದುವರಿದಿದೆ.
ಕಳೆದ ಹತ್ತು ವರ್ಷಗಳಿಂದ ತಾಲೂಕಿನಲ್ಲಿ ಆರಿದ್ರ ಮತ್ತು ಪುನರ್ವಸು ಮಳೆ ಕೇವಲ ಸೋನೆ ಮಳೆಯಾಗಿ ಕಾಣಿಸಿಕೊಂಡಿತ್ತು, ಆದರೆ, ಈ ಸಾರಿ ಮಾತ್ರ ಎರಡು ಮಳೆಗಳೂ ತುಸು ಸಮಾಧಾನ ತರುವ ರೀತಿಯಲ್ಲಿ ಮಳೆಯಾಗುತ್ತಿದೆ
ಈ ಎರಡು ಮತ್ತು ಹೊಸ ಮಳೆಗಳಿಂದ ಭೂಮಿ ತನುವಾಗಿದೆ. ಆದರೆ, ಅಂತರ್ಜಲ ಇನ್ನೂ ವೃದ್ಧಿಯಾಗಿಲ್ಲ ಅನೇಕ ತೋಟಗಳಲ್ಲಿ ತೆರೆದ ಭಾವಿಗಳು ಮಳೆಯಿಂದ ತುಂಬಿದರೂ ಸ್ವಲ್ಪ ಹೊತ್ತಿನಲ್ಲೇ ನೀರು ಕಡಿಮೆಯಾಗುತ್ತಿದೆ ಕಾರಣ ಸುತ್ತಲ ಭೂಮಿಯ ಅಂತರ್ಜಲ ಕಳೆದ ಹತ್ತಾರು ವರ್ಷಗಳಿಂದ ಒಳ್ಳೆಯ ಮಳೆಯನ್ನೇ ಕಾಣದೆ ತಾಲೂಕಿನ ಭೂಭಾಗ ಒಣಗಿಹೋಗಿದ್ದರಿಂದ ತೀವ್ರ ಪ್ರಮಾಣದಲ್ಲಿ ಅಂತರ್ಜಲ ಕುಸಿತ ಉಂಟಾಗಿದ್ದರಿಂದ ಇದೀಗ ನೀರು ಭೂಮಿಯಲ್ಲಿ ಇಂಗಿಹೋಗುತ್ತಿದೆ ಎಂದು ಹಿರಿಯರು ಅಭಿವ್ರಾಯ ಪಡುತ್ತಾರೆ.