ಪತ್ರಿಕಾ ದಿನಾಚರಣೆ
ಕಡೂರು: ಜನತಂತ್ರ ವ್ಯವಸ್ಥೆಯಲ್ಲಿ ಪತ್ರಿಕೆಗಳು ಪ್ರಭಲ ಅಸ್ತ್ರವಾಗಿ ಶ್ರೀ ಸಾಮಾನ್ಯನ ಕೈಗನ್ನಡಿಯಾಗಿವೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಹೇಳಿದರು. ತಾಪಂ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಪತ್ರಿಕೆ ವಸಮಾಜದ ಕೈಗನ್ನಡಿ, ಅಧಿಕಾರಸ್ಥರು ಎಡವಿದಾಗ ನಿರ್ದಾಕ್ಷಿಣ್ಯವಾಗಿ ಎಚ್ಚರಿಸುವುದು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಹೊಣೆಗಾರಿಕೆ ಪತ್ರಿಕೋದ್ಯಮದ ಗುರುತರ ಜವಬ್ದಾರಿ ಎಂದರು. ದೇಶದಲ್ಲಿ ಅಂತರ್ಜಾಲ ವೇಗವಾಗಿ ವಿಸ್ತರಿಸುತ್ತಿದೆ. ವಿವರ ಹಾಗೂ ಖಚಿತ ಮಾಹಿತಿಗೆ ಮುದ್ರಣ ಮಾಧ್ಯಮ ಸೂಕ್ತ ಎಂಬುದು ಓದುಗರ ಅಭಿಲಾಷೆಯಾಗಿದೆ ಎಂದರು. ತಾಪಂ ಸದಸ್ಯ ಆರ್. ಶಿವಕುಮಾರ್, ಪ್ರಭುಕುಮಾರ್ ಮತ್ತು ಬಿ.ಟಿ. ಗಂಗಾಧರನಾಯ್ಕ ಮಾತನಾಡಿದರು. ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ತಾಪ ಅಧ್ಯಕ್ಷ ಓಂಕಾರಪ್ಪ ಮಾತನಾಡಿ, ಮಾಧ್ಯಮಗಳು ಜನರನ್ನು ಉತ್ತಮ ಸಮಾಜದೆಡೆಗೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದರು. ತಾಲೂಕು ಅಧ್ಯಕ್ಷ ಎಚ್. ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಪ ಕಾರ್ಯನಿರ್ವಹಣಾಧಿಕಾರಿ ಮೂರ್ತಿ, ತಾಪಂ ಸದಸ್ಯ ಬಸವರಾಜಪ್ಪ, ಶಶಿಕುಮಾರ್, ಪುರಸಭಾ ಸದಸ್ಯ ರಾಜೇಶ್, ಕೆ.ಎಚ್. ಶಂಕರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರಾದ ದಿವಾಕರ್, ಜಯಸಿಂಹ, ಆಹಾರ ನಿರೀಕ್ಷಕ ಚಂದ್ರಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಗಂಗಾಧರನಾಯ್ಕರನ್ನು ಸನ್ಮಾನಿಸಲಾಯಿತು.
ಮೂವತ್ತೆರಡು ನಿರ್ದೇಶಕರ ಆಯ್ಕೆ
ನರಸಿಂಹರಾಜಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ 32 ನಿರ್ದೇಶಕರ ಆಯ್ಕೆ ಸಂಪೂರ್ಣಗೊಂಡಿದೆ ಎಂದು ಚುನಾವಣಾಧಾಕಾರಿ ಬಿ.ಜಿ. ಮಾಳಮ್ಮನವರ್ ತಿಳಿಸಿದ್ದಾರೆ.
ಅವಿರೋದವಾಗಿ ಆಯ್ಕೆಯಾದವರು: ಕೃಷಿ ಇಲಾಖೆ ಅನ್ವರ್ ಜಾನ್, ಕಂದಾಯ ಇಲಾಖೆ ಶಿವಪ್ಪ, ಕಂದಾಯ ಇಲಾಖೆ ತಿಪ್ಪೇಸ್ವಾಮಿ, ಕಂದಾಯ ಇಲಾಖೆ ಗಣಪತಿ, ಜಿಪಂ ಎಂಜಿನಿಯರ್ ವಿಭಾಗ ರಾಜಕಿಶೋರ್, ಜಿಪಂ ಎಂಜಿನಿಯರ್ ವಿಭಾಗರವಿಕುಮಾರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ರಾಠೋಡ್, ಅರಣ್ಯ ಇಲಾಖೆ ಜ್ಞಾನೇಂದ್ರ, ಅರಣ್ಯ ಇಲಾಖೆ ಜಯಪ್ರಕಾಶ್, ಅರಣ್ಯ ಇಲಾಖೆ ಚಂದ್ರಶೇಖರ್, ಆರೋಗ್ಯ ಇಲಾಖೆ ಪ್ರಭಾಕರ್, ಆರೋಗ್ಯ ಇಲಾಖೆ ವರ್ಗೀಸ್, ಆರೋಗ್ಯ ಇಲಾಖೆ ಬೇಬಿ, ಆರೋಗ್ಯ ಇಲಾಖೆ ಅಮೃತೇಶ್, ತೋಟಗಾರಿಕೆ ಇಲಾಖೆ ರಂಗಸ್ವಾಮಿ, ಖಜಾನೆ ಇಲಾಖೆ ಎಸ್.ಆರ್. ನಾಗೇಶ್, ನ್ಯಾಯಾಂಗ ಇಲಾಖೆ ಪುರುಶೋತ್ತಮ್, ತಾಪಂ ರಾಜು ವಿಜಯನ್, ಶ್ರೀನಿವಾಸ್, ಕೆ.ಎಸ್. ಆಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೆ. ಅಣ್ಣಪ್ಪ.