ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ
ಮೂಡಿಗೆರೆ: ತಾಲೂಕಿನ ಶ್ರೀ ಕ್ಷೇತ್ರ ಹೊರನಾಡು ಶ್ರೀ ಅನ್ನಪೋರ್ಣೇಶ್ವರಿ ದೇವಾಲಯದಿಂದ ಹೊರನಾಡು ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಮತ್ತು ಪ್ರೌಢ ಶಾಲೆಗಳಿಗೆ ಬಿಸಿಯೂಟ ವಿತರಿಸುವ ಕಾರ್ಯಕ್ರಮಕ್ಕೆ ಡಾ.ಜಿ. ಭೀಮೇಶ್ವರ ಜೋಷಿ ದಂಪತಿಗಳು ಜಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೋಷಿ ಶ್ರೀ ಕ್ಷೇತ್ರದಿಂದ 1958ನೇ ಇಸವಿಯಲ್ಲಿ ಶಾಲೆಗಳಿಗೆ ಬಿಸಿಯೂಟದ ಯೋಜನೆ ಪ್ರಾರಂಭ ಮಾಡಲಾಗಿತ್ತು. ಇಲ್ಲಿರುವ ಸರ್ಕಾರಿ ಶಾಲೆಯನ್ನು ಕ್ಷೇತ್ರ ದತ್ತು ತೆಗೆದುಕೊಂಡಿತ್ತು. ದೇವಾಸ್ಥಾನದಲ್ಲಿ ಅಡುಗೆ ತಯಾರಿ ಮಾಡಿ ಅದನ್ನು ವಾಹನದ ಮುಖಾಂತರ ಬದ್ರತೆಯೊಂದಿಗೆ ಶಾಲೆಗೆ ಕಳುಹಿಸಿ ಮಕ್ಕಳಿಗೆ ಊಟ ವಿತರಿಸಲಾಗುವುದು ಎಂದು ಹೇಳಿದರು.
--