ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಕ್ಷಣಾ ಕಾರ್ಯದಲ್ಲಿ ಹೋಂ ಗಾರ್ಡ್ಸ್

Lingaraj Badiger
Updated On : 25 Jul 2013, 11:14 am

ಚಿಕ್ಕಮಗಳೂರು: ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಸಾರಿಗೆ ಬಸ್ ಉರುಳಿ ಬಿದ್ದ ಘಟನೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಹೋಂಗಾರ್ಡ್ 11 ಜನ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ರಕ್ಷಣಾ ತಂಡದವರು ರೋಪು, ರಕ್ಷಣಾ ಜೆಕೆಟ್ ಹಾಗೂ ಸ್ಥಳಿಯವಾಗಿ ದೊರೆತ ತೆಪ್ಪಗಳನ್ನು ಉಪಯೋಗಿಸಿಕೊಂಡು ಕೆರೆಗೆ ಬಿದ್ದ ಬಸ್‌ನಲ್ಲಿದ್ದ ಅನೇಕ ಜನರನ್ನು ರಕ್ಷಿಸಿ ಅವರನ್ನು ಬೇಲೂರಿನ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾರೆ. ರಕ್ಷಣಾ ತಂಡದಲ್ಲಿ ಜಿಲ್ಲಾ ಹೋಂಗಾರ್ಡ್ಸ್‌ನ ಕಮಾಂಡೆಂಟ್ ಫಣಿರಾಜ್, ಡೆಪ್ಯೂಟಿ ಕಮಾಂಡರ್ ರಮೇಶ್, ಹನುಮಂತಪ್ಪ ಹಾಗೂ ಹೋಂಗಾರ್ಡ್ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.
ಸಾಮಾನ್ಯ ಸಭೆ
ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಯು ಜು. 26 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement