ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ

Lingaraj Badiger
Updated On : 26 Jul 2013, 11:39 am

ಚಿಕ್ಕಮಗಳೂರು: ಇಲ್ಲಿನ ರಾಮೇಶ್ವರ ನಗರ ಬಡಾವಣೆಯ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಈ ಬಡಾವಣೆಯ ನಿವಾಸಿಗರು ಗುರುವಾರ ನಗರಸಭೆಗೆ ಮನವಿ ಸಲ್ಲಿಸಿದರು.
ನಿವಾಸಿಗರಾದ ಸಿ.ಎಚ್. ಆನಂದ್‌ರಾಜ್ ಅವರ ನೇತೃತ್ವದಲ್ಲಿ ಬಡಾವಣೆಯವರು ನಗರಸಭೆಯ ವ್ಯವಸ್ಥಾಪಕರಾದ ಕಾಂತರಾಜ್ ಅವರಿಗೆ ಮನವಿ ಸಲ್ಲಿಸಿದರು.
ರಾಮೇಶ್ವರ ನಗರದ ಎಲ್ಲಾ ರಸ್ತೆಗಳು ಕೆಸರಿನಿಂದ ಕೂಡಿದ್ದು, ವಯಸ್ಸಾದವರು, ಮಕ್ಕಳು ಸೇರಿದಂತೆ ಪಾದಚಾರಿಗಳು ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ  ನಿರ್ಮಾಣವಾಗಿದೆ. ಎಲ್ಲಿ ನೋಡಿದರಲ್ಲಿ ಕೆಸರು, ಇದರಿಂದಾಗಿ ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಅದರಲ್ಲೂ ರಾತ್ರಿ ಸಮಯದಲ್ಲಿ ಓಡಾಡಲು ಭಯವಾಗುತ್ತಿದೆ. ಕೂಡಲೇ ಇಲ್ಲಿನ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.
ಸೇತುವೆ ಕುಸಿಯುವ ಆತಂಕ: ರಾಮೇಶ್ವರ ಬಡಾವಣೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕಾಲುವೆ ಹರಿಯುತ್ತಿದ್ದು, ಕೆಲವು ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ಕಾಲುವೆ ತುಂಬಿ ಹರಿಯುತ್ತಿದೆ. ಕಾಲುವೆಯ ಉದ್ದಕ್ಕೂ ಮಣ್ಣು ಕುಸಿದಿದೆ. ಇಲ್ಲಿನ ಜನರು ಓಡಾಡಲು ಇರುವ ಸೇತುವೆ ಕುಸಿಯುವ ಸಂಭವವಿದೆ. ಅದ್ದರಿಂದ ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ರಾಮೇಶ್ವರ ಬಡಾವಣೆಯ ನಿವಾಸಿಗರಾದ ಸಂತೋಷ್  ಜೈನ್, ಎಂ.ಎನ್. ರಾಜಾಚಾರ್, ಆರ್. ಬಸವಣ್ಣ, ಜಿ. ದಯಾನಂದ, ಉಮೇಶ್, ಅಣ್ಣೇಗೌಡ,  ಸತ್ಯ ಪ್ರೇಮ್ ಕುಮಾರ್, ಅಜೀತ್ ಕುಮಾರ್, ಎಂ.ಎನ್. ಸೋಮೇಗೌಡ, ಉಮಾ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement