ವಾರ್ಡ್ ಉಪಚುನಾವಣೆಗೆ 5 ನಾಮಪತ್ರ
ಬಾಳೆಹೊನ್ನೂರು: ಇಲ್ಲಿನ ಬಿ. ಕಣಬೂರು ಗ್ರಾಮ ಪಂಚಾಯಿತಿಯ 4ನೇ ವಾರ್ಡ್‌ನ ಸದಸ್ಯರ ನಿಧನನಿಂದ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಗೆ ಈ ವರೆಗೆ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಲು ಕಡೇ ದಿನವಾದ ಬುಧವಾರದವರೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಇಬ್ರಾಹಿಂ ಶಾಫಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿ.ಎ. ಅಬ್ದುಲ್ ಲತೀಫ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಎ. ರಮೇಶ್ ಹಾಗೂ ಸಾಮಾನ್ಯ ಅಭ್ಯರ್ಥಿಗಳಾಗಿ ಕೋಶೆಸ್ ಲೋಬೋ, ಕೆ.ಎಂ. ಮಹಮ್ಮದ್ ನಾಮಪತ್ರ ಸಲ್ಲಿಸಿದ್ದಾರೆ.
ಗುರುವಾರ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಐದು ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂಗೀಕೃತವಾಗಿದೆ ಎಂದು ಚುನಾವಣಾಧಿಕಾರಿ ಎಂ.ಜಿ. ರೋಹಿತ್ ಹಾಗೂ ಉಪ ಚುನಾವಣಾಧಿಕಾರಿ ಮೋಹನ್ ತಿಳಿಸಿದ್ದಾರೆ.
27ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು, ಆ.4ರಂದು ಮತದಾನ ನಡೆಯಲಿದೆ. 4ನೇ ಕ್ಷೇತ್ರದಲ್ಲಿ ಒಟ್ಟು 1592 ಮತದಾರರಿದ್ದು, ಇದರಲ್ಲಿ 820 ಪುರುಷರು, 772 ಮಹಿಳೆಯರು ಇದ್ದಾರೆ.
4ನೇ ವಾರ್ಡ್‌ನ ಸದಸ್ಯರ ನಿಧನನಿಂದ ಸ್ಥಾನ ತೆರವಾಗಿತ್ತು.
--
ಮುಂದುವರೆದ ಗಾಳಿ ಮಳೆ:
ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ಸುರಿಯುತ್ತಿರವ ಗಾಳಿ ಮಳೆ ಗುರುವಾರವೂ ಮುಂದುವರೆದಿದ್ದು ಬುಧವಾರ ಮಧ್ಯಾಹ್ನದಿಂದ ತಾಲೂಕಿನಾದ್ಯಂತ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ಗುರುವಾರ ಸಂಜೆಯವರೆಗೂ ಇರದ ಕಾರಣ ಗ್ರಾಹಕರು ಪರದಾಡುವ ಪರಿಸ್ಥಿತಿ ಕಂಡುಬಂದಿತು.ರಾತ್ರಿ ಹಗಲು ವಿದ್ಯುತ್ ಇಲ್ಲದ ಕಗ್ಗತ್ತಲ ಪರಿಸ್ಥಿತಿ ಉಂಟಾಗಿತ್ತು.