ಒಕ್ಕಲಿಗರ ಸಂಘದ ಶಾಲೆಯಲ್ಲಿ ಗುರುವಂದನೆ
ಮೂಡಿಗೆರೆ ಜು.26 ಪಟ್ಟಣದ ಒಕ್ಕಲಿಗರ ಸಂಘದ ಶಾಲೆಯಲ್ಲಿ ಗುರುವಂದನಾ ಹಾಗೂ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಮೂಡಿಗೆರೆ ಚರ್ಚ್ ಧರ್ಮಗುರು ಲ್ಯಾನ್ಸಿ ಪಿಂಟೋ ಮಾತನಾಡಿ, ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಜ್ಞಾನಾರ್ಜನೆ ಜತೆಗೆ ಸಮಾಜದ ಉನ್ನತಿಯೆಡೆಗೆ ಚಿಂತಿಸಬೇಕು ಎಂದರು.
ವಿದ್ವಾನ್ ಶಿವಪ್ರಸಾದ್ ಭಟ್ ಮಾತನಾಡಿ, ಗುರುವಿಗೂ, ಶಿಷ್ಯರಿಗೂ ಪರಸ್ಪರ ಸಂಬಂಧ ಎಂದಿಗೂ ಕರಗುವುದಿಲ್ಲ. ಎಂದು ಹೇಳಿದರು.
ಮುಸ್ಲಿಂ ಹಿತರಕ್ಷಣ ಸಮಿತಿ ಅಧ್ಯಕ್ಷ ಕಿರುಗುಂದ ಅಬ್ಬಾಸ್ ಮಾತನಾಡಿ, ಗುರುಗಳು ಎಂಬುದು ಯಾವುದೇ ಧರ್ಮಕ್ಕೂ ಸೀಮಿತವಲ್ಲ ಎಂದರು.
ಎಂಜಿಎಂ ಆಸ್ಪತ್ರೆ ಟ್ರಸ್ಟ್ ಅಧ್ಯಕ್ಷ ಎಸ್.ಎಲ್. ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಳೇಕೋಟೆ ಎನ್. ರಮೇಶ್, ಲಯನ್ಸ್ ಅಧ್ಯಕ್ಷ ಬಿ.ಎಸ್. ಜಯರಾಮ್, ಡಾ. ಅನಂತ ಪದ್ಮನಾಭ, ವಿಎಸ್ ಶಾಲೆ ಆಡಳಿತಾಧಿಕಾರಿ ವಿಶ್ವನಾಥ್ ರೈ ಉಪಸ್ಥಿತರಿದ್ದರು. ಶಿಕ್ಷಕಿ ಬಿ.ವಿ. ಉಷಾ ಸ್ವಾಗತಿಸಿದರು. ಶಿಕ್ಷಕಿ ಕಾವ್ಯ ನಿರೂಪಿಸಿದರು. ಶಿಕ್ಷಕ ಧನಂಜಯ ಕುಮಾರ್ ವಂದಿಸಿದರು.