ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಚ್ಚಾಮಾಲು ಉಪಯೋಗಿಸಿ ಉದ್ಯಮ ಪ್ರಾರಂಭಿಸಿ: ಸುರೇಶ್

Lingaraj Badiger
Updated On : 27 Jul 2013, 10:59 am

ಕ.ಪ್ರ.ವಾರ್ತೆ  ತರೀಕೆರೆ  ಜು.26
ಸ್ಥಳೀಯವಾಗಿ ದೊರೆಯುವ ಕಚ್ಚಾಮಾಲುಗಳನ್ನು ಉಪಯೋಗಿಸಿಕೊಂಡು ಉದ್ಯಮ ಪ್ರಾರಂಭಿಸಬಹುದು ಎಂದು ಚಿಕ್ಕಮಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಜಿ. ಸುರೇಶ್ ತಿಳಿಸಿದರು.
ಚಿಕ್ಕಮಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಉದ್ಯಮ ಶೀಲಾ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಗತಿಯಾಗಬೇಕು: ವ್ಯವಸಾಯೋತ್ಪನ್ನ ಉಪಕರಣ ತಯಾರಿಸಲು ಇಲಾಖೆ ತಂತ್ರಜ್ಞಾನ, ಬೆಂಬಲ ಸೇವೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಕೈಗಾರಿಕೆ ಮಾಡುವವರು ನಾನಾ ಗುಣಗಳನ್ನು ಅಳವಡಿಸಿಕೊಂಡಿರಬೇಕು, ಸಕಾರಾತ್ಮಕವಾಗಿ ಯೋಚಿಸಬೇಕು, ಎಲ್ಲ ಉದ್ಯಮಗಳು ಪ್ರಗತಿಯಾಗಬೇಕು ಎಂದು ಹೇಳಿದರು.
ಡಾ. ಅರುಂಡಿ ನಾಗರಾಜ್ ಮಾತನಾಡಿ, ಉದ್ಯಮ ಶೀಲತಾ ಪ್ರೇರಣಾ ಶಿಬಿರ ಒಂದು ಮಹತ್ವಪೂರ್ಣ ಕಾರ್ಯಕ್ರಮವಾಗಿದೆ ಎಂದರು. ಎನ್‌ಎಸ್‌ಎಸ್ ಅಧಿಕಾರಿ ಡಾ. ಜಗದೀಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ. ಹಮೀದಾ ಬಾನು ಬೇಗಂ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರಿಗೂ ಸರ್ಕಾರದ ನೌಕರಿ ದೊರಕುವುದು ಕಷ್ಟ. ಸ್ವತಂತ್ರವಾಗಿ ಉದ್ಯಮ ನಿರ್ವಹಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಬಿ.ಪಿ. ಶಿವಮೂರ್ತಿ ಅರಿವು ಮತ್ತು ಉದ್ಯಮ ಪೇರಣೆ ಕುರಿತು ಮತ್ತು ಸಹಾಯಕ ನಿರ್ದೇಶಕ ರಿಯಾಜ್ ಅಹಮದ್ ರಿಯಾಯತಿ ಸೌಲಭ್ಯ ಕುರಿತು ಮಾತನಾಡಿದರು.
ಎಸ್‌ಎಸ್‌ಎಸ್ ಅಧಿಕಾರಿ ಪಿ.ಜಿ. ಶಿವಮೂರ್ತಿ, ದೊರೆರಾಜ್, ಪ್ರಾಂಶುಪಾಲ ಅಣ್ಣಪ್ಪ, ಉಪಪ್ರಾಚಾರ್ಯ ಜಯ್ಯಣ್ಣ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement