ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮರ ಬಿದ್ದು ವಾಹನ ಜಖಂ

Lingaraj Badiger
Updated On : 27 Jul 2013, 11:04 am

ಮೂಡಿಗೆರೆ: ತಾಲೂಕಿನ ಕಳಸ ಹೋಬಳಿಯ  ಹಿರೇಬೈಲ್‌ನಿಂದ ಹೆಮ್ಮಕ್ಕಿಗೆ ಹೋಗುತ್ತಿದ್ದ ತೂಫಾನ್ ವಾಹನದ ಮೇಲೆ ಕೋರೆ ಎಂಬಲ್ಲಿ ಮರ ಬಿದ್ದಿರುವ ಘಟನೆ ವರದಿಯಾಗಿದೆ.
  ಗುರುವಾರ ಮಧ್ಯಾಹ್ನ ಹೆಮ್ಮಕ್ಕಿ ಬಾಗದ ಕಾರ್ಮಿಕರ  ಹಿರೇಬೈಲ್‌ನಿಂದ ವಾಹನವೊಂ ದರಲ್ಲಿ ಹೆಮ್ಮಕ್ಕಿಗೆ ಕೋರೆ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿರುವ ಸಂದರ್ಭ ದಲ್ಲಿ ತೋಟವೊಂದರ ಮರ ವಾಹನದ ಮೇಲೆರಗಿದೆ. ವಾಹನ ಜಖಂಗೊಂಡಿದೆ.

ಬಾಲ ಮಂದಿರದಿಂದ ಯುವಕರು ಕಾಣೆ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‌ನಲ್ಲಿರುವ ಬಾಲಕರ ಬಾಲ ಮಂದಿರದ ಚರಣ್ (15) ಹಾಗೂ ವೆಂಕಟೇಶ್ (16) ಎಂಬ ಬಾಲಕರು ನಾಪತ್ತೆಯಾಗಿರುವ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.2 ರಂದು ಶಾಲೆಗೆ ಹೋದವರು ಸಂಸ್ಥೆಗೆ ಬಾರದೆ ಕಾಣೆಯಾಗಿದ್ದಾರೆ. ಚರಣ್ ಗೋದಿ ಮೈ ಬಣ್ಣ, ಕೋಲು ಮುಖ, (ಊರು ಗುಯಿಲಾಳು, ಐಮಂಗಳ ಹೋಬಳಿ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆ) ಹಾಗೂ ವೆಂಕಟೇಶ್ ಕೋಲು ಮುಖ, ಕೆಂಪು ಮೈಬಣ್ಣ, (ಊರು, ಕೆ.ಜಿ ಕೊಪ್ಪಲು, ಮೈಸೂರು) ಹೊಂದಿದ್ದಾನೆ. ಇವರ ಮಾಹಿತಿ ದೊರೆತಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರವಾಣಿ 08262- 235608, 220588 ನೀಡಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement