ಸಾಲ ವಸೂಲಿ ಮಾಡದಂತೆ ಎಚ್ಚರಿಕೆ
ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡುತ್ತಿದ್ದಾರೆ.
ಅಲ್ಲದೆ ಕೆಲವು ರೈತರ ವಿರುದ್ಧ ಸಿವಿಲ್ ದಾವೆ ಹೂಡುತ್ತಿದ್ದು ಇದೇ ದೋರಣೆ ಮುಂದುವರಿಸಿದರೆ ಸಹಕಾರಿ ಬ್ಯಾಂಕುಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಮೀಗ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ, ಈಗಾಗಲೇ ಅಡಕೆ ಬೆಳೆಗಾರರ ಸಾಲವನ್ನು 11 ವರ್ಷಗಳ ಕಾಲ ಮುಂದಕ್ಕೆ ಹಾಕಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹಾಗೂ ನಬಾರ್ಡ್ ಸಂಸ್ಥೆ ರಾಜ್ಯ ಉಚ್ಚನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಆದರೂ, ಸಹಕಾರ ಬ್ಯಾಂಕುಗಳು ರೈತರ ಮೇಲೆ ಸಿವಿಲ್ ದಾವೆ ಹೂಡಲು ಮುಂದಾಗಿರುವುದು ದುರದೃಷ್ಟಕರ, ಕೂಡಲೇ ರೈತರ ಸಾಲ ವಸೂಲಿ ನಿಲ್ಲಿಸದಿದ್ದರೆ ಬ್ಯಾಂಕ್ ನಿರ್ದೇಶಕರ ಮನೆ ಮುಂದೆ ರೈತರ ಜೊತೆಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಚಿನ್ ಮೀಗ ಎಚ್ಚರಿಕೆ ನೀಡಿದ್ದಾರೆ.