ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಲೇಜು ಪ್ರಯೋಗ ಶಾಲೆ

Rashmi Kasaragodu
Updated On : 30 Jul 2013, 11:20 am

ಕ.ಪ್ರ.ವಾರ್ತೆ  ತರೀಕೆರೆ  ಜು. 29
ನಾಯಕತ್ವ ಗುಣ ಬೆಳೆಸಿಕೊಳ್ಳಲು ಕಾಲೇಜು ಒಂದು ಪ್ರಯೋಗಶಾಲೆ ಇದ್ದಂತೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ಅವರು ಪಟ್ಟಣದ ಎಸ್.ಜಿ.ಎಂ. ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಾಡಾಗಿದ್ದ ರಾ.ಸೇ. ಯೋಜನೆಯ ಕ್ರೀಡೆ, ಸಾಂಸ್ಕೃತಿಕ, ರೆಡ್‌ಕ್ರಾಸ್, ಸ್ಕೌಟ್ಸ್, ಗೈಡ್ಸ್ ಇತ್ಯಾದಿ
ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ನೆರವೇರಿಸಿ ಮಾತನಾಡಿದರು.
ನಾಯಕತ್ವ ಗುಣ: ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಜೊತೆಗೆ, ಇತರ ಎಲ್ಲ ಶೈಕ್ಷಣಿಕ ಚಟುವಟಿಕಗಳಲ್ಲಿ  ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ  ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಗುರಿ ಮತ್ತು ಉದ್ದೇಶ ಹೊಂದಿರಬೇಕು ಎಂದರು.
ವಿದ್ಯೆಯ ಜೊತೆಗೆ ಎಲ್ಲ ಚಟುವಟಿಕಗೆಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.
ಕೌಶಲ್ಯ ತುಂಬುವ ಶಿಕ್ಷಣ ಅಗತ್ಯ: ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಪ್ರಸ್ತುತ ದಿನ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಉದ್ದೇಶ ಮತ್ತು ಗುರಿ ಕಾಣಿಸದೆ, ಒಂದು ರೀತಿಯ ಹತಾಶೆ, ನಿರಾಶೆ ಮನೋಭಾವನೆ ಕಾಣುತ್ತದೆ. ಪದವಿ ಪತ್ರ ಪಡೆದ ವಿದ್ಯಾರ್ಥಿಗೆ ಅದರಿಂದ ಉದ್ಯೋಗ ಹೊಂದುತ್ತೇನೆಂಬ ವಿಶ್ವಾಸ ಮತ್ತು ಕೌಶಲ್ಯ ತುಂಬುವ ಉನ್ನತ ಶಿಕ್ಷಣವನ್ನು ನೀಡಬೇಕಿದೆ ಎಂದರು.
ಭರವಸೆ ಬೇಕು: ಶಿಗ್ಗಾವಿ ಗೋಟಗೋಡಿ ಕರ್ನಾಟಕ ಜನಪದ ವಿವಿ ಸಂಯೋಜಕ ಡಾ. ಶ್ರೀಶೈಲ ಹುದ್ದಾರ  ಮಾತನಾಡಿ, ಭರವಸೆಗಳಿಲ್ಲದ ಬದುಕು ಬದುಕಲ್ಲ. ವಿದ್ಯೆ ನಮ್ಮಲ್ಲಿ ಭರವಸೆಗಳನ್ನು ತುಂಬಬೇಕು,
ನಮ್ಮ ಶಿಕ್ಷಣ ವ್ಯವಸ್ಥೆ ವಿದ್ಯೆಯ ಜೊತೆಗೆ ಅನ್ನವನ್ನೂ ತೋರುವಂತಾಗಬೇಕು, ಆಗ ಮಾತ್ರ ಸದೃಡವಾದ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ, ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೇ ಜೋತು ಬೀಳದೆ, ಪಠ್ಯದ
ಆಚಿನ ವಿಷಯಗಳ ಕಡೆಗೂ ಗಮನ ಹರಿಸಬೇಕು. ನಾಡು ನುಡಿ, ಪರಂಪರೆ, ಇತಿಹಾಸ ಅರಿಯುವ ಮಾನವೀಯ ಮೌಲ್ಯ ಬಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು. ರಾಜ್ಯ ಪ್ರಶಸ್ತಿ ಪುರಸ್ಕೃತ  ಕಲಾವಿದ ಬಸವರಾಜ ಶಿಗ್ಗಾಂವಿ, ವೀರೇಶ್ ಹಿರೇಮಠ್ ಅವರು ಸಹ ಗಾಯನ ನೀಡಿದರು. ಪ್ರಾಚಾರ್ಯ ಪ್ರೊ. ಕೆ.ವಿ. ಸಜ್ಜನ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ವಿ.ವಿ. ಡಾಕ್ಟರೇಟ್ ಪದವಿ ಪಡೆದ ಡಾ.ಆರ್.ವಿ. ಹೆಗಡಾಳ್ ನಿವೃತ್ತ ಪ್ರೊ. ಎಸ್.ವಿ. ಗಂಗಾಧರಯ್ಯ ಅವರನ್ನು ಗೌರವಿಸಲಾಯಿತು. ಕೆ.ಆರ್.ವಿರೇಶ್ ಸ್ವಾಗತಿಸಿದರು. ಶೃತಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement