ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜೆಡಿಎಸ್, ಕಾಂಗ್ರೆಸ್ ಡೋಂಗಿ ಜಾತ್ಯತೀತ ಪಕ್ಷಗಳು

Rashmi Kasaragodu
Updated On : 30 Jul 2013, 11:22 am

ಚಿಕ್ಕಮಗಳೂರು: ಜಾತ್ಯತೀತ ಪಕ್ಷಗಳೆಂದು ನಾಮಫಲಕ ಹಾಕಿಕೊಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್‌ಗೆ ಸೀಮಿತಗೊಳಿಸಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಆರೋಪಿಸಿದ್ದಾರೆ.
 ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಲ್ಪಸಂಖ್ಯಾತ ಮೋರ್ಚಾ ನಗರ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎ. ದಾವೂದ್ ಅವರನ್ನು ಸೋಮವಾರ ಅಭಿನಂದಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಬಿಜೆಪಿಯಿಂದ ದೂರಗೊಳಿಸುವ ಹುನ್ನಾರ ನಡೆಸಿ ಕಳೆದ ಹಲವು ದಶಕಗಳಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅವರಿಗೆ ಯಾವುದೇ ರೀತಿ ಸೌಲಭ್ಯ ಒದಗಿಸದೆ ಮೊಣಕೈಗೆ ತುಪ್ಪ ಸವೆರುತ್ತಾ ಭರವಸೆಯ ಮಹಾಪೂರವೆ ಹರಿಸಿದ್ದಾರೆ ಎಂದರು.
ಸಮಾನವಾಗಿ ಕಂಡಿದೆ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡುವ ಮೂಲಕ ಎಲ್ಲರನ್ನು ಸಮಾನವಾಗಿ ಕಂಡಿದೆ. ಈ ಸಂಬಂಧ ಆಡಳಿತ ಪಕ್ಷದ ಉಹಾಪೋಹಗಳಿಗೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರೆ ಉತ್ತರ ಹೇಳುವ ಕಾಲ ಸನ್ನಿಹಿತವಾಗಿದೆ ಎಂದರು.
ಡೋಂಗಿ ಜಾತ್ಯತೀತ ಪಕ್ಷಗಳು: ಸಿ.ಎ. ದಾವೂದ್ ಮಾತನಾಡಿ, ಕಾಂಗ್ರೆಸ್ ಗೊಡ್ಡು ಭರವಸೆಗಳನ್ನು ಕಳೆದ 5 ದಶಕಗಳಿಂದ ಅನುಭವಿಸಿದ್ದೇವೆ. ಅಲ್ಪಸಂಖ್ಯಾತರಲ್ಲಿ ಕಡುಬಡವರೆ ಹೆಚ್ಚಾಗಿರುವ ಒಳಗುಟ್ಟನ್ನು ಅರಿತ ಡೋಂಗಿ ಜಾತ್ಯತೀತ ಪಕ್ಷಗಳು ಅಲ್ಪಸಂಖ್ಯಾತರ ಹೆಸರಿನಲ್ಲಿ ಅದೆಷ್ಟೋ ಮಂದಿ ತಮ್ಮ ಬೊಕ್ಕಸ ಗಟ್ಟಿಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
  ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹಮದ್ ಅನ್ವರ್, ನಗರ ಸಭಾ ಸದಸ್ಯರಾದ ಕೆ.ಎಸ್. ಪುಷ್ಪರಾಜ್, ರವೀಂದ್ರ ಪ್ರಭು, ಮಾಜಿ ಸದಸ್ಯ ಸಗಾಯಿದಾಸ್, ಕನಕರಾಜ್, ಕೆ.ಪಿ. ವೆಂಕಟೇಶ್, ಸೀತಾರಾಂ ಭರಣ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement