ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಲ್ನಡಿಗೆಯ ಸಾಹಸಿ ಕಿರಣ ಮಸ್ಕಿಗೆ ಸನ್ಮಾನ

Rashmi Kasaragodu
Updated On : 31 Jul 2013, 11:16 am

ಗೋವಾ ತಲುಪುವ ಮೂಲಕ ಗುರಿ ಸಾಧನೆ ೤ ಬುಡಕಟ್ಟು ಜನರ ಅಭಿವೃದ್ಧಿಗೆ  ಪಾದಯಾತ್ರೆ


ಮೂಡಿಗೆರೆ: ಬುಡಕಟ್ಟು ಜನರ ಅಭಿವೃದ್ಧಿಗಾಗಿ 21ವರ್ಷಗಳಿಂದಲೂ ದೇಶದಾದ್ಯಂತ ಪಾದಯಾತ್ರೆ ನಡೆಸುತ್ತಿರುವ ಗೋವದ ಕಿರಣ ಮಸ್ಕಿ ಮಂಗಳವಾರದಂದು ಕಾಫಿ ನಾಡಿನ ತವರು ಮೂಡಿಗೆರೆ ಭೇಟಿ ನೀಡಿದ್ದರು.
ಡಿಪ್ಲೊಮೋ ಮಾಡಿರುವ ಕಿರಣ್ ಮಸ್ಕಿ ನಿವೃತ್ತ ಯೋಧರೊಬ್ಬರ ಪ್ರೇರಣೆಯಿಂದ 1991ರ ಜೂನ್ 5 ರಿಂದ ಪಾದಯಾತ್ರೆ ಪ್ರಾರಂಭ ಮಾಡಿದ್ದು, ಗುಜರಾತ್, ಪಂಜಾಬ್, ದೆಹಲಿ, ಮಹಾರಾಷ್ಟ್ರ, ಅಸ್ಸಾಂ, ಓರಿಸ್ಸಾ ಮೂಲಕ ಕಾಲ್ನಡಿಗೆಯ ಸಂಚಾರ ಮಾಡಿ, ಅಂತಿಮವಾಗಿ ಕರ್ನಾಟಕ ಸುತ್ತುತ್ತಿದ್ದಾರೆ.ಇನ್ನೊಂದು ತಿಂಗಳಲ್ಲಿ ತಿಂಗಳಲ್ಲಿ ಗೋವಾ ತಲುಪುವ ಮೂಲಕ ಗುರಿ ಮುಟ್ಟಲಿದ್ದಾರೆ.
ಅಭಿನಂದನೆ: ಮೂಡಿಗೆರೆ ತಾಲೂಕು ಕಚೇರಿಗೆ ಆಗಮಿಸಿದ ಕಿರಣಣ್ಮಸ್ಕಿ ಅವರನ್ನು ನೌಕರರ ಸಂಘದ ಅಧ್ಯಕ್ಷ ಎಂ.ಗಂಗಾಧರ್, ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು, ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ನಂತರ ಮಾತನಾಡಿದ ಕಿರಣ್, ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡರು.
ಜಾತೀಯತೆ: ಸ್ತ್ರೀ ಪ್ರಾಬಲ್ಯದ ಬಿಹಾರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶಗಳಲ್ಲಿ ಜಾತೀಯತೆ ಅಧಿಕವಾಗಿದ್ದರೆ, ನಾಗಲ್ಯಾಂಡ್ ಹಾಗೂ ಮಿಜೋರಾಂ ಬುಡಕಟ್ಟು ಜನಾಂಗದಲ್ಲಿ ಮದುವೆಯಾದ ನಂತರ ಗಂಡನೇ ಪತ್ನಿಯ ಮನೆಗೆ ತೆರಳಿ ಅವಳ ಸೇವಕನಂತೆ ಕೆಲಸ ಮಡುತ್ತಾನೆ ಎಂದರು.
ಕರ್ನಾಟಕದ ಹಾಸನ, ಹುಣಸೂರ್, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಸವಾಗಿರುವ ಹಕ್ಕಿ-ಪಿಕ್ಕಿ ಜನಾಂಗ ಅತ್ಯಂತ ವಿಭಿನ್ನವಾಗಿದ್ದು. ಮಗು ಜನಿಸಿದಾಕ್ಷಣ ತಂದೆಯ ಮನಸ್ಸಿನಲ್ಲಿ ಯಾವ ಪದ ಮೊದಲು  ಬರುತ್ತದೋ ಅದನ್ನೇ ಹೆಸರಾಗಿ ಇಡುವ ಸಂಪ್ರದಾಯವಿದೆ ಎಂದರು.
21ವರ್ಷ ಕಾಲ ಕಾಲ್ನಡಿಗೆ ಬಗ್ಗೆ ಲೇಖನಗಳನ್ನು ತಯಾರಿಸಿದ್ದು, ಗೋವಾ ತಲುಪಿದ ನಂತರ ಇದನ್ನೊಂದು ಪುಸ್ತಕವನ್ನಾಗಿ ಪ್ರಕಟಿಸಿ, ಇದರಲ್ಲಿ ತಾವು ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ, ಸಲಹೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಸರ್ಕಾರ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಮುಂದಾದರೆ ದೇಶವ್ಯಾಪ್ತಿ ಪಾದಯಾತ್ರೆ ಮಾಡಿದಕ್ಕೆ ಸಾರ್ಥಕವಾಗುತ್ತದೆ ಎಂಬುದು ಮಸ್ಕಿ ಅಭಿಪ್ರಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement