ಇಂದು ವೈದ್ಯಕೀಯ ತಪಾಸಣಾ ಶಿಬಿರ
ನರಸಿಂಹರಾಜಪುರ: ರಾಷ್ಟೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಪ್ರೌಢ ಶಾಲಾ ವಿಕಲ ಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಗಸ್ಟ್ 1 ರ ಗುರುವಾರ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ವಿಕಲ ಚೇತನ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಮೇಶ್ ಕೋರಿದ್ದಾರೆ.
ಮನೆ ಮೇಲೆ ಉರುಳಿದ ಮರ
ಸಾಗರ: ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಂತೆಯಲ್ಲಿ ಭೀಮನಕೋಣೆ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಎಚ್. ಶಿವಪ್ಪ ಎಂಬುವವರ ಮನೆಯ ಮೇಲೆ ಬುಧವಾರ ಅರಳಿ ಮರ ಉರುಳಿ ಬಿದ್ದಿದ್ದು, ಸುಮಾರು 2 ಲಕ್ಷ ನಷ್ಟ ಸಂಭವಿಸಿದೆ. ಬುಧವಾರ ಎಚ್.ಶಿವಪ್ಪ ಮನೆಯಲ್ಲಿ ಇರುವ ಸಂದರ್ಭದಲ್ಲಿಯೇ ಮರ ಮುರಿದು ಬಿದ್ದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.