ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾರ್ಗಿಲ್ ವಿಜಯೋತ್ಸವ

Lingaraj Badiger
Updated On : 1 Aug 2013, 10:52 am

ಶೃಂಗೇರಿ: ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಎನ್ಎಸ್ಎಸ್ ಹಾಗೂ ಎನ್ಸಿಸಿ ಘಟಕಗಳ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ಹಾಗೂ ವೀರ ಯೋಧರಿಗೆ ನಮನ ಕಾರ್ಯಕ್ರಮ ನಡೆಯಿತು.  ಉಡುಪಿ 21 ಕರ್ನಾಟಕ ಎನ್ಸಿಸಿ ಬೆಟಾಲಿಯನ್  ಕಮಾಂಡಿಗ್ ಅಧಿಕಾರಿ ಬಿ.ಎಸ್. ಗಿವಾರಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಗಿಲ್ನ ಪ್ರತಿಕೂಲ ವಾತಾವರಣ ಹಾಗೂ ಯುದ್ಧದಲ್ಲಿ ಪಾಲ್ಗೊಂಡ ನಮ್ಮ ವೀರ ಸೈನಿಕರ ಶೌರ್ಯ, ಸಾಹಸಗಳ ಬಗ್ಗೆ ವಿವರಿಸಿದರು. ಎನ್ಸಿಸಿ ಅಧಿಕಾರಿ ಡಾ.ಇ.ಎಸ್. ಕುಮಾರ ಸ್ವಾಮಿ ಉಡುಪ, ಎನ್ಎಸ್ಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಪ್ರಶಾಂತ್, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement