ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮುಂದುವರೆದ ಮಳೆ ಆರ್ಭಟ

Vishwanath S
Updated On : 2 Jun 2013, 12:49 pm

ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಬೀಳುತ್ತಿದೆ. ಕಳೆದೆರೆಡು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿದ್ದು, ಮಳೆಗಾಲದ ವಾತಾವರಣ ಉಂಟಾಗಿದೆ. ಮೇ ಕೊನೆಯ ವಾರದಿಂದಲೇ ಮಳೆ ಬೀಳಲು ಆರಂಭವಾಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಮಳೆ ಬೇಗ ಬೀಳಲು ಆರಂಭವಾಗಿದೆ. ಜೂನ್ 3ಕ್ಕೆ ಮುಂಗಾರು ಪ್ರವೇಶಿಸುವುದಾದರೂ ಈಗಾಗಲೇ ಮಳೆ ಬೀಳುತ್ತಿರುವುದರಿಂದ ಮುಂಗಾರು ಮಳೆ ಆರಂಭವಾದಂತಿದೆ.
  ಶುಕ್ರವಾರ ಗುಡುಗು ಸಹಿತ ಧಾರಾಕಾರ ಮಳೆ ಬಿದ್ದಿತು. ಸತತ ಮಳೆಯಿಂದ ಹಳ್ಳ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಬತ್ತಿ ಹೋದಂತಿದ್ದ ನದಿ, ಹಳ್ಳಗಳು ಮಳೆಯಿಂದ ಮತ್ತೆ ಜೀವಕಳೆ ತುಂಬಿ ಹರಿಯುತ್ತಿದೆ. ಮಳೆ ಬೀಳುತ್ತಿದ್ದರೂ, ಸರ್ಕಾರ ಗುಟ್ಕಾ ನಿಷೇದ ಮಾಡಿರುವ ಪರಿಣಾಮ ಅಡಿಕೆ ಬೆಳೆಗಾರರಲ್ಲಿ ಆತಂಕ ಉಂಟಾಗಿದೆ. ಒಂದೆಡೆ ಬೆಲೆ ಕುಸಿತ, ಹಳದಿ ಎಲೆ ರೋಗ, ಸಾಲದ ಹೊರೆಯಿಂದ ಶೋಚನೀಯ ಸ್ಥಿತಿಯಲ್ಲಿದ್ದ ರೈತ ಈಗ ಗುಟ್ಕಾ ನಿಷೇಧದಿಂದ ಕಂಗೆಟ್ಟಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement