ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಯೋಜನೆ ಫಲಾನುಭವಿಗಳಿಗೆ ದೊರಕಲಿ

Vishwanath S
Updated On : 2 Jun 2013, 12:49 pm

ಶೃಂಗೇರಿ: ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆ, ಸಮಾರಂಭಗಳಲ್ಲಿ ನಾನಾ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವು ಸಮಪರ್ಕ ಅರ್ಹ ಫಲಾನುಭವಿಗಳಿಗೆ ತಲುಪದಿದ್ದಾಗ ಪ್ರಯೋಜನವಾದರೂ ಏನು. ಹೀಗೆಂದು ನೆಮ್ಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮ ಸಭೆಯಲ್ಲಿ  ಗ್ರಾಮಸ್ಥ ಶ್ರಿನೀವಾಸ್ ಹೆಗ್ಡೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಪ್ರಶ್ನಿಸಿದರು. ನೆಮ್ಮಾರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ, ಸರಿಯಾದ ಔಷಧಿ ಸಾಮಗ್ರಿಗಳಿಲ್ಲ. ಇದು ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಮುಖ ಆಸ್ಪತ್ರೆಯಾಗಿದೆ. ಪ್ರಥಮ ಚಿಕಿತ್ಸೆ ಸೌಕರ್ಯ ಸೇರಿದಂತೆ ಅಗತ್ಯ ಔಷಧಿ ಸಾಮಗ್ರಿಗಳ ವ್ಯವಸ್ಥೆ ಕೂಡಲೇ ಕಲ್ಪಿಸಬೇಕು. ದೂರದ ಹಳ್ಳಿಗಳಿಂದ ರೋಗಿಗಳು ಬಂದು ಔಷಧಿ ಪಡೆಯದೇ ಹೋಗುವುದು ನಿಲ್ಲಿಸಲೀ ಎಂದರು.  ಸಭೆಯಲ್ಲಿ ಹಳೇಮನೆ ದುರಸ್ತಿ, ರಸ್ತೆ, ಕಿರು ಸೇತುವೆ, ಆಶ್ರಯ ಮನೆಗಳಿಗೆ ಸಂಬಂಧಿಸಿದಂತೆ ಅಹವಾಲು  ಮಂಡಿಸಿ ಮನವಿ ಸಲ್ಲಿಸಲ್ಪಟ್ಟವು. ಹಳೆಮನೆ ದುರಸ್ತಿಗೆ, ಕಿರು ಸೇತುವೆ, ರಸ್ತೆ ದುರಸ್ತಿ ಸಂಬಂಧಿಸಿದಂತೆ ಮನವಿ ಸಲ್ಲಿಸಿದರೂ, ಅದರ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೇ ಇಲ್ಲ ಎಂದು ಕೆಲ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಗ್ರಾಪಂ ಅಧ್ಯಕ್ಷೆ ಲಲಿತಾ ರಾಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement