ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿವಿಧ ಕೋರ್ಸ್‌ಗೆ ಅರ್ಜಿ ಆಹ್ವಾನ

Vishwanath S
Updated On : 2 Jun 2013, 12:50 pm

ಚಿಕ್ಕಮಗಳೂರು: ಮೈಸೂರಿನ ಮಾನಸ ಗಂಗೋತ್ರಿಯ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ ವತಿಯಿಂದ 2013-14ನೇ ಸಾಲಿಗೆ ಮೂರು ವರ್ಷಗಳ ಡಿಪ್ಲೊಮೋ ಪ್ರವೇಶಕ್ಕೆ ವಿಕಲಚೇತನ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕಮರ್ಷಿಯಲ್ ಪ್ರಾಕ್ಟೀಸ್, ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಕೋರ್ಸಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂ. 28 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್, ಜೆಎ್ಯ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ಮಾನಸ ಗಂಗೋತ್ರಿ, ಮೈಸೂರು, ಇವರನ್ನು ಸಂಪರ್ಕಿಸಬಹುದು.

ಇಂದು ಜೇಸಿರೇಟ್ ಪದಗ್ರಹಣ
ಶೃಂಗೇರಿ: ಇಲ್ಲಿನ ಅದ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ಜೆಸಿಐ ಆಶ್ರಯದಲ್ಲಿ ಜೇಸೀರೇಟ್ ಪದಗ್ರಹಣ ಸಮಾರಂಭ ಭಾನುವಾರ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷ ತಲಗಾರು ನಾಗೇಶ ವಹಿಸಲಿದ್ದಾರೆ. ಜೇಸೀರೇಟ್ ವಲಯ ನಿರ್ದೇಶಕ ರೇವತಿ ಪೂವಯ್ಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎಸ್. ಪೂರ್ಣಿಮ, ಪಪಂ ಸದಸ್ಯೆ ಸುಮಾ ಸೋಮಶೇಖರ್, ನಿಯೋಜಿತೆ ಜೇಸೀರೇಟ್ ರೇಖಾ ಬಾಲಗಂಗಾಧರ್, ವಿಜಯ್ ಕುಮಾರ್, ಮಂಜುನಾಥ್, ಗಜಾನನ ಎಂ. ಭಟ್,ಎನ್.ಸಿ.ಪಾಂಡುರಂಗ, ಭಾಗ್ಯ ಪ್ರಕಾಶ್ ಮೊದಲಾದವರು ಪಾಲ್ಗೊಳಲಿದ್ದಾರೆ.

ನೀರು  ಸರಬರಾಜಿಗೆ ಶಾಸಕರ ಸೂಚನೆ
ತರೀಕೆರೆ: ಡೆಂಘೀ ವರದಿಯಾಗಿರುವ ತಾಲೂಕಿನ ಕುಡ್ಲೂರು, ನಾಗವಂಗಲ ಗ್ರಾಮಗಳಿಗೆ ಕೂಡಲೇ ಸಮರ್ಪಕಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಎಚ್. ಶ್ರೀನಿವಾಸ್ ಸೂಚಿಸಿದ್ದಾರೆ.
 ಅವರು ಕುಡ್ಲೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಜಿಲ್ಲಾಧಿಕಾರಿಗಳೊಡನೆ ದೂರವಾಣಿ ಮೂಲಕ ಮಾತನಾಡಿ, ಕೂಡಲೇ ಕುಡ್ಲೂರು ನಾಗವಂಗಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸೂಚಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಉಪವಿಭಾಗಾಧಿಕಾರಿ ಅನುರಾಥ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಅಭಿವೃದ್ಧಿ ಭರವಸೆಕೇವಲ ಹುಸಿ
ಕೊಪ್ಪ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಮಾಡುವುದಾಗಿ ನೀಡಿದ ಭರವಸೆಗಳೆಲ್ಲಾ ಹುಸಿಯಾಗಿದ್ದು, ಈ ಪ್ರದೇಶಗಳು ಇನ್ನೂ ಕೂಡ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ನಕ್ಸಲ್ ಪೀಡಿತ ಪ್ರದೇಶದ ಗ್ರಾಮಸ್ಥರು ಆರೋಪಿಸಿದರು. ತಾಲೂಕಿನ ಮೆಣಸಿನ ಹಾಡ್ಯದ ಗಿರಿಜನ ಆಶ್ರಮ ಶಾಲೆಯಲ್ಲಿ ಶನಿವಾರ ತಾಲೂಕು ಮಟ್ಟದ ನಕ್ಸಲ್ ಪೀಡಿತ  ಪ್ರದೇಶದ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಅಹವಾಲು ಸಲ್ಲಿಸಿದ ಅವರು ನಕ್ಸಲರಿಂದ ದಾಳಿಯಾದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹತ್ತು ಹಲವು ಭರವಸೆ ನೀಡಿದ್ದರು. ಅಧ್ಯಕ್ಷತೆಯನ್ನು ಅತ್ತಿಕೊಡಿಗೆ ಗ್ರಾಪಂ ಉಪಾಧ್ಯಕ್ಷ ಕೆ.ಪಿ. ಗೋಪಾಲ ಕೃಷ್ಣ ಸಭೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಬಿ.ಆರ್. ನಾರಯಾಣ್ ಇದ್ದರು. ತಹಸೀಲ್ದಾರ್ ಎಸ್. ಶ್ರೀಧರ್, ಡಿವೈಎಸ್ಪಿ ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement