ಕಾರ್ಯಕರ್ತರ ಶ್ರಮದಿಂದ ಗೆಲುವು: ದತ್ತ
ಕಡೂರು: ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಪಡೆಯಿಂದ ನಾನು ಗೆಲುವು ಸಾಧಿಸಲು ಕಾರಣವಾಯಿತು ಎಂದು ಶಾಸಕ ವೈ ಎಸ್.ವಿ. ದತ್ತ ಹೇಳಿದರು.
ಪಟ್ಟಣದ ದೊಡ್ಡಪೇಟೆಯ ಬ್ಯಾಗಡೇಹಳ್ಳಿಯ ದಿವಂಗತ ಬಿ. ಲೋಕನಾಥ್ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿ, ಬಿ. ಲೋಕನಾಥ್ ತಾವು ಕಡೂರು ಕ್ಷೇತ್ರದ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ತಮ್ಮ ಜೊತೆ ಕೈ ಜೋಡಿಸಿ ಅತ್ಯುತ್ತಮವಾಗಿ ಶ್ರಮಿಸಿದ್ದರು. ಅವರ ನಿಧನದ ನಂತರ ಅವರ ಪುತ್ರ ಬಿ.ಎಲ್. ಕುಮಾರ್ ನನ್ನ ಗೆಲುವಿನಲ್ಲಿ ಭಾಗಿಯಾಗಿದ್ದಾರೆ ಎಂದರು.
ಕ್ಷೇತ್ರದ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದ್ದು ಆ ಮೂಲಕ ತಾವು ಸರ್ಕಾರದ ಗಮನ ಸೆಳೆದು ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದರು. ಭಂಢಾರಿ ಶ್ರೀನಿವಾಸ್, ಬಿ.ಎಲ್. ಕುಮಾರ್, ಕೆ.ಎಸ್. ತಿಪ್ಪೇಶ್, ಬಿ.ಟಿ. ಕೃಷ್ಣಮೂರ್ತಿ, ಲೋಕೇಶ್, ಮಂಜುನಾಥ್ ಇದ್ದರು.
--