ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಧಾರಾಕಾರ ಮಳೆ; ಆದರೂ ಕುಡಿಯುವ ನೀರಿಗೆ ಪರದಾಟ

Lingaraj Badiger
Updated On : 3 Jun 2013, 10:58 am

ಶೃಂಗೇರಿ: ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದರೂ ಕುಡಿಯುವ ನೀರಿಗಾಗಿ ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
 ಇದು ತಾಲೂಕಿನ ನೆಮ್ಮಾರು ಪಂಚಾಯಿತಿಯ ನೆಮ್ಮಾರು, ಕುರಾದ್ಮನೆ, ಸುತ್ತಮುತ್ತಲ ಗ್ರಾಮಗಳ ಜ್ವಲಂತ ಸಮಸ್ಯೆಯಾಗಿದೆ. ಎರಡು ಟ್ಯಾಂಕ್‌ಗಳಿವೆ, ಸಾಕಷ್ಟು ನಲ್ಲಿಗಳಿವೆ. ಆದರೆ ಸಮರ್ಪಕವಾಗಿ ನೀರೆತ್ತುವ ಸಾಮಾರ್ಥ್ಯವುಳ್ಳ ಯಂತ್ರದ ಕೊರತೆ ಕಳೆದ ಕೆಲ ವರ್ಷಗಳ ಸಮಸ್ಯೆಯಾಗಿದೆ.
 ಗ್ರಾಮ ಸಭೆ, ಜನಸ್ಪಂದನ ಸಭೆಗಳಲ್ಲಿ ಇದರ ಬಗ್ಗೆ ಕೇಳುವುದನ್ನೆ ಬಿಟ್ಟಿದ್ದಾರೆ. ಏಕೆಂದರೆ ಇದರ ಬಗ್ಗೆ ಸಾಕಷ್ಟು ಭಾರಿ ಗ್ರಾಮಸಭೆ. ಜನಸ್ಪಂದನ ಸಭೆಗಳಲ್ಲಿ ಗಮನ ಸೆಳೆದರೂ ಜನಪ್ರತಿನಿದಿಗಳು, ಸ್ಥಳಿಯ ಪಂಚಾಯಿತಿ ಆಸಕ್ತಿ ವಹಿಸುತ್ತಿಲ್ಲ. ಮಳೆಗಾಲದಲ್ಲಿ ಮಳೆ ನೀರೇ ಗತಿ. ಏಕೆಂದರೆ ಮೋಟರ್ ಕೆಟ್ಟರೆ ಹದಿನೈದು ದಿನ ಕುಡಿಯುವ ನೀರಿಲ್ಲ. ಇನ್ನು ವಿದ್ಯುತ್ ಇಲ್ಲದಿದ್ದರೆ ನೀರಿಲ್ಲ. ಬೇಸಿಗೆಯಾಗಲಿ, ಮಳೆಗಾಲವಾಗಲಿ ಸಮಸ್ಯೆ ಮಾತ್ರ ಒಂದೇ ಕುಡಿಯುವ ನೀರಿನ ಸಮಸ್ಯೆ.
 ಇನ್ನು ಕುರಾದ್ಮನೆ ಕಾಲನಿಯಲ್ಲಿ ನಲ್ಲಿಗಳಿದ್ದರೂ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಇಡೀ ಕಾಲೋನಿಗೆ ಸುಣ್ಣಬಣ್ಣ ಕಾಣದ ಓಬೀರಾಯನ ಕಾಲದ ಭಾವಿಯೊಂದೇ ಗತಿ. ಇಲ್ಲಿನ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಜನಪ್ರತಿನಿದಿಗಳು, ಸಂಬಂಧಪಟ್ಟ ಅಧಿಕಾರಿಗಳು ಇದರತ್ತ ಗಮನ ಹರಿಸಲೇ ಇಲ್ಲ. ಗ್ರಾಮಸಭೆ, ಜನಸ್ಪಂದನ ಸಭೆಗಳಲ್ಲಿ ಇವರ ಅಹವಾಲುಗಳಿಗೆ ಮನ್ನಣೆಯೇ ಇಲ್ಲದಂತಾಗಿದೆ.
ಮಳೆಗಾಲದಲ್ಲಿ ಇವರಿಗೆ ಮಳೆನೀರೆ ಗತಿ. ತುಂಗಾ ನದಿ ತುಂಬಿ ಹರಿಯುವದರಿಂದ ಅಲ್ಲಿಂದ ನೀರು ತರಲು ಕಷ್ಟ ಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement