ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಿ: ನಾಗೇಶ್
ಶೃಂಗೇರಿ: ಸಮಾಜದಲ್ಲಿನ ಪ್ರತಿಯೊಂದು ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜೆಸಿಐ ಅಧ್ಯಕ್ಷ ತಲಗಾರು ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಅಧ್ವೆತ ಲ್ಯಾನ್ಸರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜೇಸೀರೇಟ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಸಿ ಸಂಸ್ಥೆ ಆರೋಗ್ಯ, ಶಿಕ್ಷಣ, ಪರಿಸರ, ಕಾನೂನು ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವು ಉಪಯುಕ್ತ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಇಂತಹ ಸಮಾಜಮುಖಿ ಕೆಲಸಗಳಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದ್ದು, ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಪೂರ್ಣಿಮಾ ಕೆ.ಎಸ್,ಪಟ್ಟಣ ಪಂಚಾಯಿತಿ ಸದಸ್ಯೆ ಸುಮಾ ಸೋಮಶೇಖರ್, ಜೇಸೀರೇಟ್ ಅಧ್ಯಕ್ಷೆ ರೇಖಾ ಬಾಲಗಂಗಾಧರ್, ಗಜಾನನ ಎಂ ಭಟ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಜೇಸೀರೇಟ್ ನೂತನ ಅಧ್ಯಕ್ಷೆಯಾಗಿ ರೇಖ ಬಾಲಗಂಗಾಧರ್, ಕಾರ್ಯದರ್ಶಿಯಾಗಿ ಭಾಗ್ಯಪ್ರಕಾಶ್, ಸಹ ಕಾರ್ಯದರ್ಶಿಯಾಗಿ ಲೀಲಾವಕಿ ರವಿಶಂಕರ್, ಉಪಾಧ್ಯಕ್ಷರಾಗಿ ಉಷಾನಾಗೇಶ್, ಸ್ವಪ್ನ ಅರವಿಂದ್, ಭಾರತೀ ಸತೀಶ್, ಗಾಯತ್ರಿ ವಿಶ್ವನಾಥ್, ಸುಮಾ ಮಂಜುನಾಥ ಗೌಡ, ಖಜಾಂಚಿಯಾಗಿ ವಿಜಯಲಕ್ಷ್ಮಿ ರಮೇಶ್ ಅಧಿಕಾರ ಸ್ವೀಕರಿಸಿದರು. ವಿಜಯ್‌ಕುಮಾರ್ ಸ್ವಾಗತಿಸಿದರು. ನಾಗೇಶ್ ನಿರೂಪಿಸಿದರು.