13 ವರ್ಷದ ಬಳಿಕ ತುಂಬಿದ ಕೆರೆ
ಕ.ಪ್ರ.ವಾರ್ತೆ ಕಡೂರು ಜೂ. 3
ಹದಿಮೂರು ವರ್ಷಗಳಿಂದಲೂ ತುಂಬದೇ ಇದ್ದ ಕೆರೆಯೊಂದು ಈ ಭಾರಿ ಬಿದ್ದ ಭಾರೀ ಮಳೆಗೆ ತುಂಬುವ ಮೂಲಕ ಮತಿಘಟ್ಟ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಜನರಲ್ಲಿ ಸಂತಸ ತಂದಿದೆ.
ಕಡೂರು ತಾಲೂಕು ಮತಿಘಟ್ಟ ಗ್ರಾಮದ ದೇವೀರಹಳ್ಳಿ ರಸ್ತೆಯ ಪಕ್ಕದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರಸ್ವಾಮಿ ಕೆರೆಯು ಕಳೆದ 13 ವರ್ಷದಿಂದ ಬರಗಾಲದಿಂದಾಗಿ ತುಂಬದೆ ಜನರು ನೀರಿಗಾಗಿ ಪರಿತಪಿಸುತ್ತಿದ್ದರು. ಗ್ರಾಮದ ಹಿರಿಯರು ಹೇಳುವ ಹಾಗೆ ಈ ಕೆರೆಯಿಂದಲೇ ಊರ ದೇವರ ಪುಣ್ಯದ ಕಾರ್ಯಗಳಿಗೆ ಪುಣ್ಯಾಹ ಕಾರ್ಯ ಮಾಡುವ ಉದ್ದೇಶದಿಂದ ಇಲ್ಲಿಯೇ ದೇವರುಗಳನ್ನು ಕರೆತಂದು ಹೊಳೆಪೂಜೆ ಮಾಡಿ ಮತ್ತು ಗಂಗೆ ಪೂಜೆ ನೆರವೇರಿಸುವ ಮೂಲಕ ದೇವರ ಜಾತ್ರಾ ಮಹೋತ್ಸವಗಳಿಗೆ ಚಾಲನೆ ನೀಡಲಾಗುತ್ತಿತ್ತು.
ಆದರೆ ಬರಗಾಲದಿಂದಾಗಿ ಅಂತರ್ಜಲವೂ ಕಡಿಮೆಯಾಗಿ ನೀರು ಸಿಗದೆ ಜನ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರು ಎಂದರು.