ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಝಂ ನೇರಲೆಗೆ ಭಾರಿ ಬೇಡಿಕೆ

Lingaraj Badiger
Updated On : 4 Jun 2013, 11:02 am

ಕ.ಪ್ರ.ವಾರ್ತೆ, ತರೀಕೆರೆ,  ಜೂ.3
ಮಲೆನಾಡಿನಲ್ಲಿ ಮುಂಗಾರು ಮಳೆ ಶುರುವಾಯಿತೆಂದರೆ ಅದರ ಬೆನ್ನಲ್ಲೇ ರುಚಿಯಾದ ನೇರಳೆ ಹಣ್ಣಿಗೆ ಅಪಾರ ಬೇಡಿಕೆ ಇರುತ್ತದೆ.
ಮಲೆನಾಡ ಹೆಬ್ಬಾಗಿಲು ತರೀಕೆರೆ ಮತ್ತು ಸುತ್ತಮುತ್ತಲಿನ ನೇರಳೆ ಮರಗಳಲ್ಲಿ ಬಿಡುವ ಬಣ್ಣ ಬಣ್ಣದ, ನಾಲಿಗೆ ನೀರೂರಿಸುವಂತಹ ವಿವಿಧ ನೇರಳೆ ಹಣ್ಣಿಗೆ ಮೊದಲಿನಿಂದಲೂ ಹೆಸರು ಪಡೆದಿದೆ.
ಅದರಲ್ಲೂ ದೊಡ್ಡ ಗಾತ್ರದ ಝಂ ನೇರಳೆ ಹಣ್ಣಿಗಂತೂ ಆಪಾರ ಬೇಡಿಕೆ ಇದೆ.  
ಔಷಧಯುಕ್ತ ಜೀವಸತ್ವ ಹೊಂದಿರುವ ತಾಜಾ ಝಂ ನೇರಲೆ ಹಣ್ಣನ್ನು ಗ್ರಾಹಕರು ಇಷ್ಟಪಡುತ್ತಾರೆ. ಹಾಗಾಗಿ ತರೀಕೆರೆ ಮಾರುಕಟ್ಟೆಯಲ್ಲಿ ಝಂ ನೇರಳೆ ಹಣ್ಣು ಚಿನಕುರುಳಿ ಖರ್ಚಾದ ಹಾಗೆ ಖರ್ಚಾಗುತ್ತದೆ.
--
ರಸ್ತೆ ಮಧ್ಯ ಗುಂಡಿ: ಪಪಂ ನಿರ್ಲಕ್ಷ್ಯ
ಸೊರಬ: ತಾಲೂಕಿನ ಕೆಲವೆಡೆ ಡೆಂಘೀ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಜನತೆಗೆ ಆರೋಗ್ಯ ಇಲಾಖೆ ವತಿಯಿಂದ ಎಚ್ಚರಿಕೆ ನೀಡಲಾಗುತ್ತಿದೆ.
ಇಲಾಖೆಯೊಂದಿಗೆ ಪಟ್ಟಣ ಪಂಚಾಯ್ತಿ ಸಹಾ ಕೈ ಜೋಡಿಸಿ ಎಚ್ಚರ ನೀಡುವಲ್ಲಿ ಮುಂದಾಗಿರುವುದು ಸ್ವಾಗತಾರ್ಹವೇನೋ ಹೌದು. ಆದರೆ, ಪಪಂ ತನ್ನ ಕೊಳಕು ಗಮನಿಸುವುದು ಬಿಟ್ಟು ನಿಮ್ಮ ಊರು, ಮನೆ, ಸುತ್ತ ಮುತ್ತ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕೆಲ ವರ್ತಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯ ದೊಡ್ಡ ಗುಂಡಿಯಲ್ಲಿ ಕೊಳೆತ ತ್ಯಾಜ್ಯಗಳೊಂದಿಗಿನ ನೀರು ಮಡುಗಟ್ಟಿದೆ, ಸುತ್ತೆಲ್ಲ ಸುಮಾರು 200 ಮೀ.ವ್ಯಾಪ್ತಿ ದುರ್ನಾತ ಬೀರುತ್ತಿರುವ ಈ ಗುಂಡಿಯಲ್ಲಿ ಈಗಾಗಲೆ ರಾತ್ರಿ ವೇಳೆ ಗಮನಿಸದೆ ಬಿದ್ದು ಗಾಯಗೊಂಡ ನಿದರ್ಶನವೂ ಇದೆ. ಈ ದುರ್ನಾತದಿಂದಾಗಿ ಕಾಂಪ್ಲೆಕ್ಸ್ನಲ್ಲಿನ ಅಂಗಡಿಗಳಿಗೆ ಬರುವ ಗಿರಾಕಿಗಳೂ ಕಡಿಮೆಯಾಗಿದ್ದಾರೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement