ಇಂದಿನಿಂದ ಗ್ರಾಪಂಗಳಲ್ಲಿ ಗ್ರಾಮಸಭೆ
ನರಸಿಂಹರಾಜಪುರ: ತಾಲೂಕಿನ 14 ಗ್ರಾಪಂಗಳಲ್ಲಿ ಈ ವರ್ಷದ ಮೊದಲ ಹಂತದ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಯು ಜೂನ್ 5 ರಿಂದ ಪ್ರಾರಂಭಗೊಂಡು ಜುಲೈ 4ರವರೆಗೆ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮ ಸಭೆ ನಡೆಯುವ ದಿನಾಂಕ: ಜೂನ್ 5 ಮತ್ತು 6 ರಂದು ಮೆಣಸೂರು ಗ್ರಾಪಂ, ಜೂನ್ 11 ನಾಗಲಾಪುರ ಗ್ರಾಪಂ, ಜೂನ್ 12 ಕರ್ಕೇಶ್ವರ ಗ್ರಾಪಂ, ಜೂನ್ 17 ಆಡುವಳ್ಳಿ, ಜೂನ್ 18 ಮಾಗುಂಡಿ, ಜೂನ್ 19 ಮತ್ತು 20 ರಂದು ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿಗಳಲ್ಲಿ ಸಭೆ ನಡೆಯಲಿದೆ.
ಜೂನ್ 22 ರಂದು ಕಡಹಿನಬೈಲು, ಜೂನ್ 24 ರಂದು ಬಾಳೆ ಗ್ರಾಪಂ, ಜೂ. 25 ಹಾಗೂ 26 ರಂದು ಸೀತೂರು ಗ್ರಾಪಂ, ಜೂ.27 ರಂದು ಗುಬ್ಬಿಗಾ ಗ್ರಾಪಂ, ಜೂ.28ರಂದು ಕಾನೂರು ಗ್ರಾಪಂ, ಜೂ.29ರಂದು ಹೊನನ್ನೇಕುಡಿಗೆ, ಜುಲೈ 1 ಮತ್ತು 2 ರಂದು ಬಿ.ಕಣಬೂರು, ಜುಲೈ 3 ಹಾಗೂ 4 ರಂದು ಬಿ.ಕಣಬೂರು ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆ ನಡೆಯಲಿದೆ. ಆಯಾ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಪ್ರಯೋಜನ ಪಡದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.