ಕುಡಿಯುವ ನೀರಿಗೆ ಪರದಾಟ
ಶೃಂಗೇರಿ: ತಾಲೂಕಿನ ವಿವಿಧೆಡೆ ಕುಡಿಯುವ ನೀರಿಗಾಗಿ ಪರದಾಟ ಮುಂದುವರೆದಿದೆ. ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ನೆಮ್ಮಾರು, ಕುರಾದ್ಮನೆ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ, ಪರದಾಟ ಮುಂದುವರೆದರೂ ಸ್ಥಳೀಯ ಪಂಚಾಯಿತಿ ಸೇರಿದಂತೆ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ನಲ್ಲಿ, ಟ್ಯಾಂಕ್ಗ್ಳಿದ್ದರೂ ಜನರು ತುಂಗಾನದಿ ತುಂಬಿ ಹರಿಯುವಾಗ ಮಳೆ ನೀರನ್ನೇ ಉಪಯೋಗಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ, ಪಂಚಾಯಿತಿ ಮಾತ್ರ ನಿರ್ಲಕ್ಷ ವಹಿಸುತ್ತಲೇ ಬಂದಿದೆ. ತಾಲೂಕಿನ ಕೆಲವೆಡೆ ಇದೇ ಸಮಸ್ಯೆ ಮುಂದುವರೆದಿದೆ.