'ಭವನ ನಿರ್ಮಾಣಕ್ಕೆ ಸಹಕಾರ'
ತರೀಕೆರೆ: ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಸಮೀಪದ ಲಕ್ಕವಳ್ಳಿ ಬಳಿಯ ಹುಣಸೇನಹಳ್ಳಿ ಹಜರತ್ ನಫೀಷಾ, ಷಫೀಷಾ ದರ್ಗಾದಿಂದ ಏರ್ಪಡಿಸಿದ್ದ ವಾರ್ಷಿಕ ಉರೂಸ್ ಗಂಧೋತ್ಸವದಲ್ಲಿ ಮಾತನಾಡಿದರು.
ತಾಲೂಕಿನಾದ್ಯಂತ ಎಲ್ಲ ವರ್ಗದವರ ಹಿತಾಸಕ್ತಿಯನ್ನು ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ, ಹುಣಸೇನಹಳ್ಳಿ ದರ್ಗಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಸಮುದಾಯ ಭವನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಹಕರಿಸುವುದಾಗಿ ತಿಳಿಸಿದರು. ಎ.ಜಿ. ಸಿರಾಜ್ ಅಹಮದ್ ಮಾತನಾಡಿದರು. ಅಬ್ದುಲ್ ಘನಿ ಅನ್ವರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಪಂ ಸದಸ್ಯ ಎಲ್.ಎ. ಅನ್ಬು, ಸೀತಾರಾಂ ಮಾತನಾಡಿದರು. ಅಬ್ದುಲ್ ಘನಿ ಅನ್ವರ್ ಹಾಗೂ ಸಮಿತಿ ಸದಸ್ಯರು ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಸನ್ಮಾನಿಸಿದರು. ಸೈಯದ್ ಅಬು ತಾಹಿರ್, ನಂದಕುಮಾರ್, ಖಲೀಲ್, ರಾಜ್ ಕಿಶೋರ್, ಶ್ರೀಧರ್, ಅಮ್ಜದ್ ಖಾನ್ ಇದ್ದರು.